ಉಜಿರೆ: ಮಂದಿರ ಮಹಾ ಸಂಘ, ಕರ್ನಾಟಕ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಂಗೂರಿನಲ್ಲಿ ನಡೆದ ರಾಜ್ಯ ಅಧಿವೇಶನದಲ್ಲಿ ನಿರ್ಣಯಿಸಿದ ಪ್ರಕಾರ ರಾಜ್ಯದಲ್ಲೆ ಪ್ರಥಮವಾಗಿ ಸಾಮೂಹಿಕ ಆರತಿ ಕಾರ್ಯಕ್ರಮವು ಬೆಳ್ತಂಗಡಿ ತಾಲೂಕಿನ ಶ್ರೀ ಪರಶುರಾಮ ದೇವಸ್ಥಾನ, ಮುಂಡಾಜೆಯಲ್ಲಿ ಇಂದು (ಜ. 10) ಸಂಜೆ 6.30 ರಿಂದ 7 ತನಕ ನಡೆಯಲಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.