ಕರ್ನಾಟಕ ರಾಜ್ಯ ಡಾ ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ನಂದಶ್ರೀ ಜೈನ್ ಉಡುಪಿ ಇವರು 96.75% ಪಡೆದು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ
ಇವರು ಬೆಂಗಳೂರಿನ ವಿದುಷಿ ಕಮಲಿನಿ ಹೆಗಡೆ ಹಾಗೂ ವಿದ್ವಾನ್ ಮಧೂರ್ ಪಿ ಬಾಲಸುಬ್ರಹ್ಮಣ್ಯಂ, ಮುಕುಂದ ಕೃಪ ಉಡುಪಿ ಇವರ ಬಳಿ ಸಂಗೀತ ಅಭ್ಯಾಸ ಮಾಡಿರುತ್ತಾರೆ. ಪ್ರಸ್ತುತ ವಿದುಷಿ ಚೇತನ ಆಚಾರ್ಯ ಇವರ ಬಳಿ ಸಂಗೀತ ಸೀನಿಯರ್ ಅಭ್ಯಾಸ ಮಾಡುತ್ತಿದ್ದಾರೆ.
ಇವರು ಧರ್ಮಪಾಲ್ ಮತ್ತು ಯಶಸ್ವತಿ ಧರ್ಮಸ್ಥಳ ಇವರ ಪುತ್ರಿ ಹಾಗೂ ಡಾ ಅರ್ಹಂತ್ ಕುಮಾರ್ ಉಡುಪಿ ಇವರ ಧರ್ಮಪತ್ನಿ.