ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡಬಿದ್ರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಇವರ ಸಹಭಾಗಿತ್ವದಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಪ್ರತಿಭಾ ಕಲೋತ್ಸವ ಮತ್ತು ಜಿಲ್ಲಾ ಮಟ್ಟದ ಕ್ರೀಡೋತ್ಸವ ಸ್ಪರ್ಧೆಯು ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾಗಿರಿ ಮೂಡಬಿದ್ರೆ ಮತ್ತು ಸ್ವರಾಜ್ಯ ಮೈದಾನ ಮೂಡಬಿದ್ರೆಯಲ್ಲಿ ನಡೆಯಿತು.
ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿಗಳು ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯಾರ್ಥಿನಿಗಳಾದ ಅಭಿಜ್ಞಾ 6 ನೇ ತರಗತಿ, ಯಶ್ವಿ 7 ನೇ ತರಗತಿ, ಕಾವ್ಯಶ್ರೀ 7 ನೇ ತರಗತಿ, ಸಾದ್ವಿ 7 ನೇ ತರಗತಿ, ಪವೀಕ್ಷ 8 ನೇ ತರಗತಿ, ದೀಕ್ಷಿತ 8 ನೇ ತರಗತಿ, ಕನಿಷ್ಕ 8ನೇ ತರಗತಿ, ಸಹನಾ 9 ನೇ ತರಗತಿ, ನಿಧಿ 9 ನೇ ತರಗತಿ, ಕೃತಿ 9 ನೇ ತರಗತಿ, ಪೂಜಿತ 9 ನೇ ತರಗತಿ, ನೇಹಾ 9 ನೇ ತರಗತಿ, ಹುನೈದಾ 10 ನೇ ತರಗತಿ.
ಇವರಲ್ಲಿ ಪವೀಕ್ಷಾ ಗುಂಡೆಸೆತ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಕೃತಿ ಜಾವಲಿನ್ ಎಸೆತದಲ್ಲಿ ತೃತೀಯ ಬಹುಮಾನ ಗಳಿಸಿದ ಶಾಲೆಗೆ ಕೀರ್ತಿ ತಂದಿರುತ್ತಾರೆ.