ಧರ್ಮಸ್ಥಳ : ಸುಭಾಷ್ ಯಾದವ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತ” ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಧರ್ಮಸ್ಥಳ ಇದರ ಆಶ್ರಯದಲ್ಲಿ ಇಕೋ ಫ್ರೆಶ್ ಎಂಟರ್ ಪ್ರೈಸಸ್ ಬೆಳ್ತಂಗಡಿ-ಪುತ್ತೂರು ಇದರ ಸಹಯೋಗದೊಂದಿಗೆ ರೈತರಿಗಾಗಿ ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟ ಜ.13 ರಿಂದ ಜ. 18 ರವರೆಗೆ ಬೆಳಿಗ್ಗೆ 10.00ರಿಂದ ಸಂಜೆ 5.00 ಗಂಟೆಯವರೆಗೆ ಧರ್ಮಸ್ಥಳ ಅಟಲ್ ಜೀ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪ್ರೀತಮ್ ಡಿ ತಿಳಿಸಿದ್ದಾರೆ.
ಈ ವೇಳೆ ಯಂತ್ರೋಪಕರಣ ಮೇಳದ ಪ್ರಯುಕ್ತ ಕಾಳುಮೆಣಸು ಬೇರ್ಪಡಿಸಿಕೊಡಲಾಗುವುದು ಜೊತೆಗೆ ನೀವು ತಂದ ಕಾಳುಮೆಣಸನ್ನು ಉಚಿತವಾಗಿ ಸ್ಥಳದಲ್ಲಿಯೇ ಸುಳಿದು ಕೊಡಲಾಗುವುದು (ವಿಶೇಷ ಸೂಚನೆ : ಸೋಮವಾರ ದಂದು ಮಾತ್ರ).
ಕಾರ್ಯಕ್ರಮದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.