30.7 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಟ್ರಮೆಯ ಹಿಂದೂ ಯುವಕನ ಜೊತೆ ನೆಲ್ಲಿಕಾರಿನ ಮುಸ್ಲಿಂ ಯುವತಿ ವಿವಾಹ

ಬೆಳ್ತಂಗಡಿ: ನಾಪತ್ತೆಯಾಗಿದ್ದ ನೆಲ್ಲಿಕಾರಿನ ಮುಸ್ಲಿಂ ಯುವತಿಯು ತಾನು ಪ್ರೀತಿಸುತ್ತಿದ್ದ ಪಟ್ರಮೆಯ ಹಿಂದೂ ಯುವಕನೊಂದಿಗೆ ದೇವಸ್ಥಾನದಲ್ಲಿ ವಿವಾಹವಾಗಿರುವ ಘಟನೆ ನಡೆದಿದೆ.

ನೆಲ್ಲಿಕಾರಿನ ಯುವತಿ ನಾಪತ್ತೆಯಾದ ಬಗ್ಗೆ ಯುವತಿ ಮನೆಯವರು ಮೂಡಬಿದ್ರೆಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ನಾಪತ್ತೆಯಾಗಿದ್ದ ಯುವತಿ ಹಾಗೂ ಧರ್ಮಸ್ಥಳ ಸಮೀಪದ ಪಟ್ರಮೆಯ ಹರೀಶ್ ಎಂಬ ಯುವಕನ ನಡುವೆ ಕಳೆದ ಒಂದು ವರ್ಷದಿಂದ ಫೇಸ್‌ಬುಕ್ ಮೂಲಕ ಪರಿಚಯವಾಗಿ ಮುಂದೆ ಅವರಿಬ್ಬರ ನಡುವೆ ಪ್ರೇಮಾಂಕುರವಾಗಲು ಕಾರಣವಾಗಿತ್ತು. ಇಬ್ಬರು ವಿವಾಹವಾಗಲು ನಿರ್ಧಾರಕ್ಕೆ ಬಂದಿದ್ದರು. ಈ ಹಿನ್ನಲೆಯಲ್ಲಿ ಯುವತಿ ಮನೆಮಂದಿಗೂ ತಿಳಿಸದೇ ಯುವಕನ ಸೂಚನೆಯಂತೆ ನೇರವಾಗಿ ಬೆಳ್ತಂಗಡಿಗೆ ಬಂದಿದ್ದರು.

ದೇವಸ್ಥಾನದಲ್ಲಿ ಇಬ್ಬರು ಹಾರ ಬದಲಾಯಿಸಿಕೊಂಡು ಮಾಂಗಲ್ಯಧಾರಣೆ ಮಾಡಿದ್ದಾರೆ. ಮುಸ್ಲಿಂ ಯುವತಿ ತನ್ನ ಇಚ್ಚೆಯಂತೆ ಹಿಂದು ಸಂಪ್ರದಾಯ ಪ್ರಕಾರ ಹಿಂದು ಯುವಕನೊಂದಿಗೆ ವಿವಾಹವಾಗಿದ್ದಳು. ನವದಂಪತಿ ನೇರವಾಗಿ ಬೆಳ್ತಂಗಡಿ ವಿವಾಹ ನೊಂದಾವಣಾ ಕಚೇರಿಗೆ ತೆರಳಿ, ಹಿಂದು ವಿವಾಹ ಕಾಯಿದೆಯ ಪ್ರಕಾರ ವಿವಾಹ ನೊಂದಾವಣೆಗೆ ಅರ್ಜಿ ಸಲ್ಲಿಸಿದ್ದಾರೆ.

ಯುವತಿ ನಾಪತ್ತೆ ಪ್ರಕರಣ ಕುರಿತು ಮೂಡುಬಿದಿರೆ ಪೊಲೀಸರು ತನಿಖೆ ಆರಂಭಿಸಿದ್ದರು. ಅದೇ ಸಂದರ್ಭದಲ್ಲಿ ಇವರಿಬ್ಬರು ವಿವಾಹವಾಗಿ ಧರ್ಮಸ್ಥಳ ಠಾಣೆಗೆ ಹಾಜರಾಗಿದ್ದರು. ಈ ವಿಚಾರವು ಮೂಡಬಿದ್ರೆಯ ಪೊಲೀಸರಿಗೆ ತಿಳಿಯುತ್ತಿದ್ದಂತೆ ಆಕೆಯ ಮನೆಮಂದಿಯನ್ನು ಠಾಣೆಗೆ ಕರೆಯಿಸಿ ನಡೆದಿರುವ ಬೆಳವಣಿಗೆ ಹಾಗೂ ವಿವಾಹವಾದ ಫೋಟೋಗಳನ್ನು ತೋರ್ಪಡಿಸಿದ್ದಾರೆ.

Related posts

ತಾಲೂಕಿನ ಮೂರು ಮಂದಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Suddi Udaya

ಧರ್ಮಸ್ಥಳ ಬೂತ್ ಸಂಖ್ಯೆ 163ರ ಅಧ್ಯಕ್ಷ ಉಮಾನಾಥ್ ರವರ ಮನೆಗೆ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

Suddi Udaya

ಬೆಳ್ತಂಗಡಿ : ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟ

Suddi Udaya

ಮುಂಡಾಜೆ: ನದಿಯಲ್ಲಿ ಈಜಲು ಹೋಗಿ ವಿದ್ಯಾರ್ಥಿ ಸಾವು

Suddi Udaya

ಕಾರ್ಗಿಲ್ ವಿಜಯ ದಿನ: ಉಜಿರೆ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಕಾರ್ಗಿಲ್ ವನಕ್ಕೆ ಭೇಟಿ

Suddi Udaya

ಮಾ.21-24: ಶಿಶಿಲ ಶ್ರೀ ಗಡಿ ಚಾಮುಂಡಿ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ

Suddi Udaya
error: Content is protected !!