ಕೊಕ್ಕಡ : ಸಂಗಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕೊಕ್ಕಡ ಇದರ ವಾರ್ಷಿಕ ಮಹಾಸಭೆಯು ಜ. 08ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಕುಸುಮ ವಹಿಸಿದ್ದರು. ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ವ್ಯವಸ್ಥಾಪಕರು ಕೃಷಿಯೇತರ ನಿತೇಶ್ ರವರು ಕೃಷಿಯೇತರ ಚಟುವಟಿಕೆಗಳ ಬಗ್ಗೆ ಉತ್ಪದನ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ದೀಪಕ್ ರಾಜ್ ರವರು, ವಲಯ ಮೇಲ್ವಿಚಾರಕರಾದ ಕೌಶಲ್ಯ ವೀಣಾಶ್ರೀರವರು, ಒಕ್ಕೂಟದ ಸದಸ್ಯರುಗಳು ಉಪಸ್ಥಿತರಿದ್ದರು.
ಸಾಧಕಿ ಶ್ರೀಮತಿ ವಾರಿಜರವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ವಾರ್ಷಿಕ ವರದಿಯನ್ನು ಎಮ್.ಬಿ.ಕೆ ಯಶೋದಾ ಮಂಡಿಸಿದರು. ಅಡಿಟ್ ಜಮಾ ಖರ್ಚು ವಿವರವನ್ನು ಒಕ್ಕೂಟದ ಸದಸ್ಯೆ ಅಶ್ವಿನಿ ಓದಿದರು. ಘನತ್ಯಾಜ್ಯದ ಜಮಾ ಖರ್ಚು ವಿವರವನ್ನು ಒಕ್ಕೂಟದ ಕಾರ್ಯದರ್ಶಿಯಾದ ಹೇಮಾವತಿ ಮಂಡಿಸಿದರು. ಸಂಘದ ಸದಸ್ಯರಿಗೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿದ್ದು ಬಹುಮಾನ ವಿತರಣೆ, ಹಾಗೂ ಅತ್ಯುತ್ತಮ ಸ್ವ ಸಹಾಯ ಸಂಘವನ್ನು ಗುರುತಿಸಲಾಯಿತು. ಕಾರ್ಯಕ್ರಮದಲ್ಲಿ ಸಂಜೀವಿನಿ ಸಂಘದ ಸದಸ್ಯೆ ತಯಾರಿಸಿದ ಅಕ್ಕಿ ರೊಟ್ಟಿ ಲಾಚಿಂಗ್ ನಡೆಯಿತು.ನಂತರ ಪದಗ್ರಹಣ ಕಾರ್ಯಕ್ರಮವನ್ನು ನಡೆಸಲಾಯಿತು.
ಹಳೆ ಸದಸ್ಯರನ್ನು ಕಿರು ಕಾಣಿಕೆ ನೀಡಿ ಬೀಳ್ಕೊಡಲಾಯಿತು .ಎಲ್ ಸಿ ಆರ್ ಪಿ ಗಾಯತ್ರಿ ಸ್ವಾಗತಿಸಿ, ಶ್ರೀಮತಿ ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು. ಎಲ್ ಸಿ ಆರ್ ಪಿ ಪವಿತ್ರರವರು ಧನ್ಯವಾದವಿತ್ತರು.