ಬೆಳ್ತಂಗಡಿ : ಆರು ಜನ ನಕ್ಸಲರು ಶರಣಾಗತಿಯಾದ ವೇಳೆ ಅವರು ಶಸ್ತಾಸ್ತ್ರಗಳನ್ನು ಯಾಕೆ ಕೊಟ್ಟಿಲ್ಲ. ಅವುಗಳು ಎಲ್ಲಿ ಹೋದವು ಎಂಬ ಪ್ರಶ್ನೆಗಳು ಉದ್ಭವವಾಗಿದ್ದವು. ಇದೀಗ ನಕ್ಸಲರ ಗನ್ ಗಳು ಪತ್ತೆಯಾಗಿವೆ.
ಜಯಪುರ ಸಮೀಪದ ಕಿತ್ತಲೆಗಂಡಿ ಕಾಡಿನಲ್ಲಿ ನಕ್ಸಲರು ಬಳಸುತ್ತಿದ್ದ ಶಸ್ತಾಸ್ತ್ರಗಳು ಮಣ್ಣಿನಡಿ ಹೂತಿಟ್ಟಿದ್ದು ಪತ್ತೆಯಾಗಿವೆ. ಒಂದು ಎಕೆ 56 ,ಮೂರು 303 ಬಂದೂಕು, ಒಂದು ಸಿಂಗಲ್ ಬ್ಯಾರಲ್ ಬಂದೂಕು, ಒಂದು ಪಿಸ್ತೂಲ್ ಹಾಗೂ 176 ಜೀವಂತ ಮದ್ದು ಗುಂಡುಗಳು ಪತ್ತೆಯಾಗಿವೆ.
ಆದರೆ ಗನ್ ಗಳು ಯಾರದ್ದು ಎಂದು ಪತ್ತೆಯಾಗಿಲ್ಲ. ನಕ್ಸಲೆರದ್ದೇನಾ ಎಂದು ತನಿಖೆಯಿಂದ ಗೊತ್ತಾಗಬೇಕಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ಠಾಣಾ ವ್ಯಾಪ್ತಿಯಲ್ಲಿ ಗನ್ ಗಳು ಪತ್ತೆಯಾಗಿವೆ. ಕೊಪ್ಪ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.