ಬೆಳ್ತಂಗಡಿ: ಗೋಲ್ಡನ್ ಬ್ಯೂಟಿ ಪಾರ್ಲರ್ & ಮೇಕಪ್ ಅಕಾಡೆಮಿ (ಫ್ಯಾನ್ಸಿ ಮತ್ತು ಟೈಲರಿಂಗ್) ಉದ್ಘಾಟನಾ ಸಮಾರಂಭವು ಜ.11 ರಂದು ಹಳೆಕೋಟೆ ವಾಣಿ ಕಾಲೇಜು ಎದುರುಗಡೆ ಆಧ್ಯ ಕಾಂಪ್ಲೆಕ್ಸ್ (ಪ್ರಥಮ ಮಹಡಿ) ನಲ್ಲಿ ಶುಭಾರಂಭಗೊಂಡಿದೆ.
ಉದ್ಘಾಟನೆಯನ್ನು ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಪ್ರೋ| ಸುರೇಶ್ ನೇರೆವೇರಿಸಿ ಶುಭಕೋರಿದರು. ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಬೆಳ್ತಂಗಡಿ ಇಕೋ ಪ್ರೇಶ್ ಮಾಲಕರು ರಾಕೇಶ್ ಹೆಗ್ಡೆ ದೀಪ ಪ್ರಜ್ವಲನೆ ನೆರವೇರಿಸಿ ಶುಭಹಾರೈಸಿದರು.
ಬೆಳ್ತಂಗಡಿ ಬ್ಯೂಟಿಪಾರ್ಲರ್ ಅಸೋಸಿಯೇಶನ್ ಅಧ್ಯಕ್ಷೆ ರಮ್ಮೀತಾ ಆಳ್ವ , ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗ ಮುಖ್ಯಸ್ಥರು ಶಂಕರ ರಾವ್, ಹಳೆಕೋಟೆ ಆಧ್ಯ ಕಾಂಪ್ಲೆಕ್ಸ್ ಮಾಲಕರು ಅಶ್ವತ್ಥ ಕುಮಾರ್ ದೀಪ ಪ್ರಜ್ವಲನೆಗೊಳಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಾಂತಾ ಬಂಗೇರ ಪ್ರಶಾಂತಿ ಬ್ಯೂಟಿ ಪಾರ್ಲರ್, ಜೋರ್ಡನ್ ರೀವರ್ ಫ್ಯಾಮೀಲಿ ರೆಸ್ಟೋರೆಂಟ್ ಮಾಲಕರು ಅಶ್ವಿನಿ ಡಿಸೋಜ, ಬೆಳ್ತಂಗಡಿ ಟೈಲರಿಂಗ್ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ಕೋಟ್ಯಾನ್ ಉಪಸ್ಥಿತರಿದ್ದು, ಶುಭಹಾರೈಸಿದರು.
ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕರಾದ ಜಯಮಾಲಾ ಯೋಗೀಶ್ ಸ್ವಾಗತಿಸಿ, ಸತ್ಕರಿಸಿದರು.