37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿ

ಮಾಲಾಡಿ: ಪುರಿಯ-ಕುರಿಯೋಡಿರಸ್ತೆ ಕಾಮಗಾರಿ ಸ್ಥಳಾಂತರಕ್ಕೆ ವಿರೋಧ: ಶೀಘ್ರ ಕಾಮಗಾರಿಗೆ ನಾಗರಿಕರ ಒತ್ತಾಯ

ಮಾಲಾಡಿ: ಇಲ್ಲಿಯ ಪುರಿಯ-ಕುರಿಯೋಡಿ ರಸ್ತೆ ಕಾಮಗಾರಿ ಸ್ಥಳಾಂತರಕ್ಕೆ ನಾಗರಿಕರು ವಿರೋಧ ವ್ಯಕ್ತಪಡಿಸಿ, ಶೀಘ್ರ ಕಾಮಗಾರಿಗೆ ಒತ್ತಾಯಿಸಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ.
ಪುರಿಯ ಕುರಿಯೋಡಿ ಗ್ರಾ.ಪ.ರಸ್ತೆಯಲ್ಲಿ ದಂಪತಿ ತನ್ನ ಮಗುವನ್ನು ಬೈಕಿನಲ್ಲಿ ಕುಳ್ಳಿರಿಸಿ ಸಂಚಾರ ಮಾಡುವಾಗ ಬೈಕ್ ಮಗುಚಿ ಬಿದ್ದು. ಮಗು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಗ್ರಾಮೀಣ ರಸ್ತೆಯಾದ ಪುರಿಯ-ಅಂಗನವಾಡಿ ಶಾಲೆಯ ಎದುರಿನ ಮಣ್ಣಿನ ಮಾರ್ಗ ಮುಂದುವರಿದು ಪ್ರಥಮ ತಿರುವಿನಲ್ಲಿ ರಸ್ತೆ ತೀರಾ ಅಪಾಯಕಾರಿ ಹಂತದಲ್ಲಿ ಇದ್ದು, ಕಾಂಕ್ರಿಟೀಕರಣ ಅವಶ್ಯಕತೆ ಇದೆ ಸದ್ರಿ ಪ್ರದೇಶದಲ್ಲಿ ಗೊಂದಲದ ಕಾರಣ ನೀಡಿ ಕಾಮಗಾರಿ ಸ್ಥಳಾಂತರ ಮಾಡಬಾರದು,
ನೀರು ಹೋಗುವ ಚರಂಡಿಗೆ ನೀರಾವರಿ ಪೈಪ್ ಹಾಕಿ ಮುಚ್ಚಲಾಗಿದ್ದು, ಸದ್ರಿ ರಸ್ತೆ ಚರಂಡಿಯನ್ನು ಸಮರ್ಪಕಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅಲ್ಲದೆ ಊರ ಪ್ರದೇಶದಲ್ಲಿ ರಸ್ತೆ ಅಗೆದು ಜಲ್ಲಿ ಹಾಕಿ ಹಲವು ಸಮಯಗಳಾಗಿದ್ದು, ಜಿಲ್ಲಾ ಪಂಚಾಯತಗೆ ಮನವಿ ಮಾಡಲಾಗಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿದಾರರಿಗೆ ಸೂಚನೆ ಕೊಟ್ಟಿದೆ ಎಂಬ ಪತ್ರ ಮುಖೇನ ಮಾಹಿತಿ ಲಭ್ಯವಾಗಿದ್ದು, ಈ ಕಾಮಗಾರಿ ಸಾರ್ವಜನಿಕ ಹಿತದೃಷ್ಟಿಯಿಂದ ಶೀಘ್ರವಾಗಬೇಕು,ಅಲ್ಲದೆ ಪುಂಜಾಲಕಟ್ಟೆ-ಕುಕ್ಕೇಡಿ ಜಿ.ಪ.ರಸ್ತೆ ಕಾಮಗಾರಿ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು
ಮಾಜಿ.ಗ್ರಾ.ಸದಸ್ಯ ಗುರುಪ್ರಸಾದ್ ಮಾಲಾಡಿ ಒತ್ತಾಯಿಸಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಗುರುಪ್ರಸಾದ್ ಮಾಲಾಡಿ. ಸಾಮಾಜಿಕ ಕಾರ್ಯಕರ್ತರಾದ ರಾಘವ ದೇವಾಡಿಗ, ಬಾಬು ದೇವಾಡಿಗ, ಚಂದ್ರಯ ದೇವಾಡಿಗ ಊರಿನ ಸಾರ್ವಜನಿಕರು ಉಪಸ್ಥಿತರಿದ್ದರು.

Related posts

ಮರೋಡಿ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ, ಶಿಲಾನ್ಯಾಸ

Suddi Udaya

ನದಿಗೆ ಬಲೆ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿ ಅಸಹಜವಾಗಿ ಸಾವು

Suddi Udaya

ಇಂದು (ಡಿ.2) ಗುರುವಾಯನಕೆರೆ ಎಕ್ಸೆಲ್ ಸಂಸ್ಥೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ: ಚೌಕಿ ಪೂಜೆ

Suddi Udaya

ಅನಾರೋಗ್ಯದಿಂದ ಬಳಲುತ್ತಿದ್ದ ಮೂರು ವರ್ಷದ ಹೆಣ್ಣು ಮಗು ಸಾವು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹೊಸ ವರ್ಷದ ಪ್ರಯುಕ್ತ ರಂಗಪೂಜೆ ಹಾಗೂ ಉತ್ಸವಾದಿಗಳು

Suddi Udaya
error: Content is protected !!