ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಮೃತ ಸೋಮೇಶ್ವರರವರ ನೆನಪಿಗೆ ‘ಅಮೃತ ಮಥನ’ ಕಾರ್ಯಕ್ರಮ

ಬೆಳ್ತಂಗಡಿ: ಅಮೃತ ಸೋಮೇಶ್ವರ ಅವರು ಸದಾ ಮಾನವೀಯತೆಯ ಪರವಾಗಿದ್ದರು. ವಿಶ್ವ ಮಾನವ ಕಲ್ಪನೆ ಅವರ ಉಸಿರಾಗಿತ್ತು ಎಂದು ಸಾಹಿತಿ, ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ತಿಳಿಸಿದರು.

ಬೆಳ್ತಂಗಡಿಯಲ್ಲಿ ಜರುಗಿದ ಅಮೃತ ಸೋಮೇಶ್ವರ ಅವರ ನೆನಪಿನ ಕಾರ್ಯಕ್ರಮ ‘ಅಮೃತ ಮಥನ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಮಾಜದ ಪ್ರತಿಯೊಬ್ಬರಿಗೂ ಗೌರವದ ಬದುಕು ಸಿಗಬೇಕು ಎನ್ನುವುದರ ಬಗ್ಗೆ ಅವರು ಖಚಿತ ನೋಟವನ್ನು ಹೊಂದಿದ್ದರು. ಅವರ ಸಾಹಿತ್ಯ ಇದನ್ನೇ ಪ್ರತಿಪಾದಿಸುತ್ತದೆ. ತುಳು ಸಾಹಿತ್ಯ ಮತ್ತು ಯಕ್ಷಗಾನ ರಂಗಕ್ಕೆ ಅವರು ನೀಡಿದ ತಿರುವು ಅಸಾಧಾರಣವಾದದ್ದು ಎಂದರು.

ತಂದೆಯ ವ್ಯಕ್ತಿತ್ವ ಹಾಗೂ ಸಾಹಿತ್ಯದ ಅವಲೋಕನ ನಡೆಸಿದ ಡಾ. ಚೇತನ ಸೋಮೇಶ್ವರ ಅವರು ತಂದೆ ಮೌನಿ ಆದರೆ ಸಮಾಜದ ಅನ್ಯಾಯದ ಬಗ್ಗೆ ಸದಾ ದನಿ ಎತ್ತುತ್ತಿದ್ದರು. ಅವರ ಬರಹಗಳು ಒಂದು ರೀತಿಯಲ್ಲಿ ಸಾರ್ವಜನಿಕ ಆಸ್ತಿಯಾಗಿತ್ತು. ಜನಸಾಮಾನ್ಯರು ಇವರ ಗೀತೆಗಳನ್ನು ತಮ್ಮ ಬದುಕಿನ ಪ್ರತಿಬಿಂಬ ಎಂದು ಭಾವಿಸಿದ್ದರು ಎಂದರು.

ರಂಗ ನಿರ್ದೇಶಕ ವಿದ್ದು ಉಚ್ಚಿಲ್ ಅವರು ಅಮೃತ ಸೋಮೇಶ್ವರ ಅವರ ರಂಗ ನಾಟಕಗಳ ಬಗ್ಗೆ ಮಾತನಾಡಿ ತುಳು ರಂಗಭೂಮಿಗೆ ಹೊಸತನ ದೊರಕಿದ್ದು ಅಮೃತರ ರಚನೆಗಳಿಂದ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಜೇಶ್ವರಿ ಚೇತನ್ ಅವರು ತಮ್ಮ ಮಾವನವರ ಮಾನವೀಯ ಗುಣವನ್ನು ಸ್ಮರಿಸಿದರು.

ಸಮಾಜ ವಿಜ್ಞಾನಿ ಪ್ರಕಾಶ ಭಟ್, ಚರಣ್ ಕುಮಾರ್, ನರೇಂದ್ರ ರೈ ದೇರ್ಲ, ಜಿತು ನಿಡ್ಲೆ, ಡಾ. ಉದಯಚಂದ್ರ, ಡಾ. ರವಿನಾರಾಯಣ ಚಕ್ರಕೋಡಿ ಮಾತನಾಡಿದರು

ಬೆಳ್ತಂಗಡಿಯಲ್ಲಿ ಜರುಗಿದ ‘ಅಮೃತ ಮಥನ’ ಕಾರ್ಯಕ್ರಮದಲ್ಲಿ ಅಮೃತ ಸೋಮೇಶ್ವರ ಅವರ ನುಡಿಗಳ ಫಲಕವನ್ನು ಅನಾವರಣ ಮಾಡಲಾಯಿತು. ರಾಜೇಶ್ವರಿ ಚೇತನ್, ಪ್ರಕಾಶ ಭಟ್, ಚೇತನ್ ಸೋಮೇಶ್ವರ, ವಿದ್ದು ಉಚ್ಚಿಲ್, ಜಿ ಎನ್ ಮೋಹನ್ ಹಾಜರಿದ್ದರು

Related posts

ಅರಸಿನಮಕ್ಕಿ ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ 6ನೇ ಗುರುತು ಮಾಡಿದ್ದ ಜಾಗದಲ್ಲಿ ಅಸ್ಥಿಪಂಜರ ಪತ್ತೆಯಾದ ಪ್ರಕರಣ: ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಪಡ್ಡoದಡ್ಕ ಮದರಸದಲ್ಲಿ ಬ್ಯಾಗ್ ಮತ್ತು ನೋಟ್ ಪುಸ್ತಕ ವಿತರಣೆ

Suddi Udaya

ತ್ರೋಬಾಲ್ ಪಂದ್ಯಾಟ: ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ

Suddi Udaya

ಮೇಲಂತಬೆಟ್ಟು ಕುಸುಮಾವತಿ ನಿಧನ

Suddi Udaya

ಕಳೆಂಜ ಅಮ್ಮಿನಡ್ಕ ಲೋಲಾಕ್ಷರ ಮನೆ ಪಂಚಾಂಗ ಕೆಡವಿದ ಪ್ರಕರಣ : ಆರಂಭಗೊಂಡ ಕಂದಾಯ – ಅರಣ್ಯ ಜಂಟಿ ಸರ್ವೆ

Suddi Udaya
error: Content is protected !!