ಉಜಿರೆ : ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಉಜಿರೆ ಇದರ ನೇತೃತ್ವದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ, ಸೇವಾಭಾರತಿ ಕನ್ಯಾಡಿ, ಕೆ.ಎಂ.ಸಿ. ಬ್ಲಡ್ ಬ್ಯಾಂಕ್ ಮಂಗಳೂರು ಇವರ ಸಹಯೋಗದೊಂದಿಗೆ ಜ.12ರಂದು ಬೃಹತ್ ರಕ್ತದಾನ ಶಿಬಿರವು ಉಜಿರೆ ಶಾರದಾ ಮಂಟಪದಲ್ಲಿ ಜರುಗಿತು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಶರತ್ ಕೃಷ್ಣ ಪಡುವೆಟ್ನಾಯ ಉದ್ಘಾಟಿಸಿ, ರಕ್ತದಾನ ಮಾಡುವುದು ಒಂದು ಮಹತ್ತರವಾದ ಕಾರ್ಯ, ಹಲವು ಸಂಘಟನೆಗಳ ಸಹಕಾರದಲ್ಲಿ ನಡೆಸುತ್ತಿರುವ ಈ ರಕ್ತದಾನ ಶಿಬಿರ ಮಾದರಿಯಾಗಿದೆ. ರಕ್ತದಾನದ ಮೂಲಕ ನೀವೆಲ್ಲರು ಪುಣ್ಯದ ಕೆಲಸ ಮಾಡುತ್ತಿದ್ದೀರಿ ಎಂದು ಶುಭ ಹಾರೈಸಿದರು.
ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷರಾದ ರೋ। ಪೂರನ್ ವರ್ಮ, ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ, ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಗೌಡ ಅಪ್ರಮೇಯ, ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶ್ರೀಧರ ಕೆ.ವಿ., ಸೇವಾಧಾಮ ಸಂಸ್ಥಾಪಕ ಕೆ. ವಿನಾಯಕ ರಾವ್ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದ ಯಶಸ್ಸಿಗೆ ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘ, ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಯುವ ವೇದಿಕೆ, ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಮಹಿಳಾ ವೇದಿಕೆ, ಉಜಿರೆ ಶ್ರೀ ಶಾರದಾ ಸೇವಾ ಟ್ರಸ್ಟ್, ಉಜಿರೆ ಪ್ರಗತಿ ಮಹಿಳಾ ಮಂಡಲ, ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ, ಬೆಳಾಲು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ, ಉಜಿರೆ ವಿವೇಕಾನಂದ ನಗರ ಸರಸ್ವತಿ ಭಜನಾ ಮಂಡಳಿ, ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ. ಉಜಿರೆ ಶಾಖೆ, ಬೆಳ್ತಂಗಡಿ ಕೂಟ ಮಹಾಜಗತ್ತು ಅಂಗ ಸಂಸ್ಥೆ, ನಿಡ್ಲೆ ವನದುರ್ಗಾ ಸ್ಪೋರ್ಟ್ಸ್ ಕ್ಲಬ್, ಬರೆಂಗಾಯ ಓಡಲ ಉಜಿರೆ ಚಾಮುಂಡಿಬೆಟ್ಟ ಶಿವ ಪಾರ್ವತಿ ಮಹಿಳಾ ಭಜನಾ ಮಂಡಳಿ, ಗಾಂಧಿನಗರ ಭಕ್ತ ಕುಂಬಾರರ ಸಂಘ, ಉಜಿರೆ ಭಾರತ್ ಆಟೋ ಕಾರ್ಸ್ ಪ್ರೈ. ಲಿ., ಮೂಲಾರ್ ಪರಶುರಾಮ ಫ್ರೆಂಡ್ಸ್, ಉಜಿರೆ ಹವ್ಯಕ ವಲಯ, ಮಾಚಾರು ಪ್ರಗತಿ ಯುವಕ ಮಂಡಲ, ಬೆಳ್ತಂಗಡಿ ರೋಟರಿ ಆ್ಯನ್ಸ್ ಕ್ಲಬ್, ಸುಜ್ಞಾನ ನಿಧಿ ಯೋಜನೆ, ಬದನಾಜೆ ಶಾಲೆ, ವಿಶಾಲ್ ಸೇವಾ ಟ್ರಸ್ಟ್ ಉಜಿರೆ, ನಾರ್ಯ ಎರ್ಮುಂಜೆ ಬೈಲು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ, ಅರಳಿ ಮಿತ್ರ ಯುವಕ ಮಂಡಲ, ಓಡಲ ಚಾಮುಂಡಿಬೆಟ್ಟ ಶಿವ ಪಾರ್ವತಿ ಮಹಿಳಾ ಭಜನಾ ಮಂಡಳಿ, ಬೆಳಾಲು ಡಿ.ಪಿ. ಸ್ಪೋರ್ಟ್ಸ್ ಕ್ಲಬ್ ಸಹಕರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶಿಕ್ಷಕ ರಮೇಶ್ ಪೈಲಾರ್ ಸ್ವಾಗತಿಸಿ, ಸಿ.ಆರ್.ಪಿ. ವಾರಿಜ ನಿರೂಪಿಸಿ, ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ, ಕಾರ್ಯದರ್ಶಿ ಶೇಖರ್ ಗೌಡ ಉಜಿರೆ ಧನ್ಯವಾದವಿತ್ತರು. ಒಟ್ಟು 123 ಯುನಿಟ್ ರಕ್ತ ಸಂಗ್ರಹಣೆಯಾಯಿತು.