March 7, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್‌ ಮತ್ತು ರೇಂಜರ್ಸ್‌ ದಳದಿಂದ ಚಾರಣ, ಸ್ವಚ್ಚತಾ ಆಂದೋಲನ ಮತ್ತು ಯುವ ದಿನಾಚರಣೆ

ಉಜಿರೆ: ಇಲ್ಲಿನ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ರೋವರ್ಸ್‌ ಮತ್ತು ರೇಂಜರ್ಸ್‌ದಳದಿಂದ ರಾಷ್ಟ್ರೀಯ ಯುವ ದಿನವನ್ನು ಮೂಡುಬಿದಿರೆಯ ಕೋನಾಜೆ ಕಲ್ಲಿಗೆ ಚಾರಣಗೈಯುವ ಮೂಲಕ ವಿನೂತನವಾಗಿ ಆಚರಿಸಲಾಯಿತು.



ಮೂಡುಬಿದಿರೆಯ ಕೋನಾಜೆ ಕಲ್ಲು ಒಂದು ಐತಿಹಾಸಿಕ ಮತ್ತು ಪೌರಾಣಿಕ ಪ್ರಸಿದ್ಧ ಜನಪ್ರಿಯ ಚಾರಣವಾಗಿದೆ.ಈ ಐತಿಹಾಸಿಕ ಸ್ಥಳಕ್ಕೆ ರೋವರ್ಸ್ ಮತ್ತು ರೇಂಜರ್ಸ್‌ ವಿದ್ಯಾರ್ಥಿಗಳು ಚಾರಣಗೈಯುವುದರ ಜೊತೆಗೆ ಚಾರಣಿಗರಿಂದ ಎಸೆಯಲ್ಪಟ್ಟ ಕುಡಿದ ನೀರಿನ ಬಾಟಲಿ, ಪ್ಲಾಸ್ಟಿಕ್‌ ಕವರ್ ಗಳು ಹಾಗೂ ಇನ್ನಿತರ ಪರಿಸರ ಮಾರಕ ವಸ್ತುಗಳನ್ನು ಸ್ವಚ್ಚಗೊಳಿಸುತ್ತ ಅಲ್ಲಿನ ಇತರ ಚಾರಣಿಗರಿಗೂ ಸ್ವಚ್ಚ ಪರಿಸರದ ಬಗ್ಗೆ ಅರಿವು ಮೂಡಿಸಿ ತಾವು ಸಂಗ್ರಹಿಸಿದ ನೀರಿನ ಬಾಟಲಿ, ಪ್ಲಾಸ್ಟಿಕ್‌ ಕವರ್ಗಳನ್ನು ಸೂಕ್ತ ವಿಲೇವಾರಿಗಾಗಿ ಅಲ್ಲಿನ ಶ್ರೀ ಸಿದ್ಧಾರೂಢ ಆಶ್ರಮಕ್ಕೆ ಹಸ್ತಾಂತರಿಸಿದರು.

ರಾಷ್ಟ್ರೀಯ ಯುವ ದಿನಾಚರಣೆ:

ಇದೆ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ಆಚರಿಸಲ್ಪಡುವ ರಾಷ್ಟ್ರೀಯ ಯುವ ದಿನಾಚರಣೆಯನ್ನೂ ಸರಳವಾಗಿ ಆಚರಿಸಲಾಯಿತು.ಚಾರಣದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಅರ್ಥಶಾಸ್ತ ಉಪನ್ಯಾಸಕ ಶ್ರೀ ರಾಜು ಎ ಎ ಸ್ವಾಮಿ ವಿವೇಕಾನಂದರ ಜೀವನಶೈಲಿ,ಅವರ ವಿಚಾರಧಾರೆ, ಅವರಿಂದ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲೇ ಬೇಕಾದ ಅಂಶಗಳ ಬಗ್ಗೆ ತಿಳಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಪ್ರಮೊದ್‌ ಕುಮಾರ್‌ ಬಿ ವಿದ್ಯಾರ್ಥಿಗಳ ಚಾರಣ ಹಾಗೂ ಸ್ವಚ್ಚತಾಂದೋಲನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ವಿವೇಕಾನಂದರಂತೆ ನಿಮ್ಮಲ್ಲೂ ಉತ್ಕಟ ದೇಶಪ್ರೇಮ, ಸಮಾಜಸೇವಾ ಮನೋಭಾವ ನಿರಂತರವಾಗಿ ಪ್ರವಹಿಸಲಿ ಎಂದು ಶುಭಹಾರೈಸಿದ್ದರು.

30 ರೋವರ್ಸ್‌ ಮತ್ತು 16 ರೇಂಜರ್ಸ್‌ ಸೇರಿ ಒಟ್ಟೂ 46 ವಿದ್ಯಾರ್ಥಿಗಳು ಈ ಚಾರಣದಲ್ಲಿ ಪಾಲ್ಗೊಂಡಿದ್ದರು.ಇವರ ಈ ಚಾರಣ ಮತ್ತು ಸ್ವಚ್ಚತಾಂದೋಲನಕ್ಕೆ ಕಾಲೇಜಿನ ರೋವರ್ಸ್‌ ಮತ್ತು ರೇಂಜರ್ಸ್ ದಳದ ಅಧಿಕಾರಿಗಳಾದ ಲಕ್ಷ್ಮೀಶ್‌ ಭಟ್‌ ಮತ್ತು ಅಂಕಿತಾ ಎಂ ಕೆ ಮಾರ್ಗದರ್ಶನ ನೀಡಿದರು.

Related posts

ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಪ್ಲೈವುಡ್ ಉತ್ಪನ್ನಗಳ ಪ್ರಖ್ಯಾತ ಮಳಿಗೆ “ಆನ್‌ಪ್ಲೈ” ಲಾಯಿಲದಲ್ಲಿ ಶುಭಾರಂಭ

Suddi Udaya

ನೆರಿಯ: ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಮನೆ ಸಂಪೂರ್ಣ ಹಾನಿ

Suddi Udaya

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಂದ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ “ವಿಜಯಗೋಪುರ ” ನಿರ್ಮಾಣಕ್ಕೆ ರೂ. 15 ಲಕ್ಷ ದೇಣಿಗೆ

Suddi Udaya

ಮಂಗಳೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಯುವ ಘಟಕ ಮಂಗಳೂರು ಕೋಶಾಧಿಕಾರಿಯಾಗಿ ಚೇತನ್ ಕೆಂಗುಡೇಲು

Suddi Udaya

ಬೆಳ್ತಂಗಡಿ ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ವಿಶ್ವ ಯೋಗ ದಿನಾಚರಣೆ

Suddi Udaya

ಟ್ರೆಕ್ಕಿಂಗ್ ಗೆ ಬಂದು ದಾರಿ ತಪ್ಪಿದ ಬೆಂಗಳೂರಿನ ಯುವಕ ಕಾಡಿನಲ್ಲಿ ಪತ್ತೆ

Suddi Udaya
error: Content is protected !!