September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಂದ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ “ವಿಜಯಗೋಪುರ ” ನಿರ್ಮಾಣಕ್ಕೆ ರೂ. 15 ಲಕ್ಷ ದೇಣಿಗೆ

ಧರ್ಮಸ್ಥಳ: ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಾಜಗೋಪುರ ವಿಜಯ ಗೋಪುರದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ವಿಜಯಗೋಪುರ ನಿರ್ಮಾಣಕ್ಕೆ ಧರ್ಮಸ್ಥಳದಿಂದ ಡಿ. ಹರ್ಷೇಂದ್ರ ಕುಮಾರ್ ರವರು ರೂ. 15 ಲಕ್ಷ ದೇಣಿಗೆಯ ಚೆಕ್ ಅನ್ನು ಶರತ್ ಕೃಷ್ಣ ಪನ್ವೆಟ್ನಾಯರವರಿಗೆ ಹಸ್ತಾಂತರಿಸಿದರು.

ಈ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್‌, ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕರಾದ ಕೆ.ಮೋಹನ್ ಕುಮಾರ್, ರಾಘವೇಂದ್ರ ಬೈಪಾಡಿತ್ತಾಯ, ಮಂಜುನಾಥ್ ಕಾಮತ್, ಗಣೇಶ್ ಇಂಜಿನಿಯರ್, ರವಿ ಚಕ್ಕಿತ್ತಾಯ, ರಾಮಣ್ಣ ಗೌಡ, ವಿಶ್ವನಾಥ ಶೆಟ್ಟಿ, ಸಂಜೀವ ರಾಘವೇಂದ್ರ ಪ್ರಿಂಟರ್ಸ್, ರಾಘವೇಂದ್ರ ಗೌಡ ಪಾರ, ರವೀಂದ್ರ ಶೆಟ್ಟಿ, ಪ್ರಶಾಂತ್ ಜೈನ್, ದಿನೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

Related posts

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರ

Suddi Udaya

ಅ.3 -13: ಉಪ್ಪಿನಂಗಡಿ ಸವಿ ಫೂಟ್ ವೆರ್ ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಆಫರ್

Suddi Udaya

ಮಚ್ಚಿನ: ಕುತ್ತಿನ ಶಾಲೆಯಲ್ಲಿ ಬೀಳ್ಕೊಡುಗೆ ಮತ್ತು ಮಕ್ಕಳ ಹಬ್ಬ

Suddi Udaya

ಎಸ್.ಐ.ಆರ್ ಮಾಹಿತಿಗಾಗಿ ನೇಮಿಸಲ್ಪಟ್ಟ ಬೂತ್ ಮಟ್ಟದ ಅಧಿಕಾರಿಗಳ ವಿಳಂಬ ನೀತಿಯ ಬಗ್ಗೆ ಬೆಳ್ತಂಗಡಿ ಎಸ್‌ಡಿಪಿಐ ಯಿಂದ ತಹಸೀಲ್ದಾರ್ ದೂರು

Suddi Udaya

ದ್ವಿತೀಯ ಪಿಯು ಫಲಿತಾಂಶ: ಮುಂಡಾಜೆ ಪದವಿ ಪೂರ್ವ ಕಾಲೇಜಿಗೆ ಶೇ.94.28 ಫಲಿತಾಂಶ

Suddi Udaya

ಬಾಲಕಿಯ ಮೇಲೆ ಅತ್ಯಾಚಾರ : ವೇಣೂರಿನ ರಿಕ್ಷಾ ಚಾಲಕ ಜಮಾಲುದ್ದೀನ್ ಬಂಧನ

Suddi Udaya
error: Content is protected !!