36.1 C
ಪುತ್ತೂರು, ಬೆಳ್ತಂಗಡಿ
January 14, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ ಸಂಗಮ್ ಯುವಕ ಮಂಡಲದ ಸದಸ್ಯರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಕೊಕ್ಕಡ ಸಂಗಮ್ ಯುವಕ ಮಂಡಲ ಇದರ ಸರ್ವ ಸದಸ್ಯರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಕೊಕ್ಕಡ ಯುವಕ ಮಂಡಲದ ಆವರಣದಲ್ಲಿ ಜ.12ರಂದು ನಡೆಯಿತು.

ಅಧ್ಯಕ್ಷತೆಯನ್ನು ಹಿರಿಯರಾದ ಕುಂಞಿಕಣ್ಣನ್ ಅವರು ವಹಿಸಿದ್ದರು. ಯುವಕ ಮಂಡಲ ಕೊಕ್ಕಡ ಸಂಗಮ್ ಯುವಕ ಮಂಡಲ ಅಧ್ಯಕ್ಷ ರೂಪೇಶ್, ಹಿರಿಯರಾದ ಗಣೇಶ್ ದೇವಾಡಿಗ, ರಜಾಕ್ ದುಬೈ ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಯುವಕ ಮಂಡಲದ ಚಟುವಟಿಕೆಗಳ ಬಗ್ಗೆ ಚರ್ಚಿಸಿ, ನೂತನ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಎಸ್.ಕೆ.ಹಕೀಂ, ಉಪಾಧ್ಯಕ್ಷರಾಗಿ ಅವಿನಾಶ್.ಕೆ, ಆಸೀಫ್, ಸುನೀತ್ ಅಗರ್ತ, ದಯಾನೀಶ್, ರಜಾಕ್ ಐವಾನ್, ಕಾರ್ಯದರ್ಶಿಯಾಗಿ ಸುನಿಶ್ ನಾಯ್ಕ್, ಜೊತೆ ಕಾರ್ಯದರ್ಶಿಯಾಗಿ ಆನ್ಸರ್, ಕೋಶಾಧಿಕಾರಿಯಾಗಿ ಗಿರೀಶ್ ಶಬರಾಡಿ, ಸದಸ್ಯರಾಗಿ ಚೇತನ್.ಟಿ.ಎಲ್, ಶರೀಫ್ ಆಲ್ಫಾ, ಉಮರ್ ಬೈಲಂಗಡಿ, ಅಶ್ವಿನ್ ಸಾಲಿಯಾನ್, ಮಿಥಿಲೇಶ್, ಹಕೀಂ ಮುಂಡೇಲ್ ಇವರುಗಳನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.

ರಜಾಕ್.ಎಂ.ಎಚ್ ಸ್ವಾಗತಿಸಿದರು, ರಾಜಗೋಪಾಲ್ ಬೆನಕ ವಂದಿಸಿದರು.

Related posts

ಕೊಯ್ಯೂರು: ಹರ್ಪಳದಲ್ಲಿ ಅಡ್ಡಲಾಗಿ ಬಿದ್ದ ಮರಗಳ ತೆರವು ಕಾರ್ಯ

Suddi Udaya

ಶಿರ್ಲಾಲು: ಶ್ರೀ ತುಳಸಿ ಮೆನ್ಸ್ ಪಾರ್ಲರ್ ಶುಭಾರಂಭ

Suddi Udaya

ಟೆಲಿಗ್ರಾಮ್‌ ಆಪ್‌ ಮೂಲಕ ಹಣ ವರ್ಗಾಹಿಸಿ ಮೋಸ: ಕುವೆಟ್ಟು ನಿವಾಸಿ ನುಪೈಲಾ ರಿಗೆ ರೂ. 6.95 ಲಕ್ಷ ವಂಚನೆ

Suddi Udaya

ಬೆಳಾಲು ಪ್ರೌಢಶಾಲೆ ಪ್ರಾರಂಭೋತ್ಸವ ಮತ್ತು ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಕಲ್ಮಂಜ : ಸಿದ್ದಬೈಲು ಪರಾರಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ “ಕ್ಷೀರಾಬ್ಧಿ” ಉದ್ಘಾಟನೆ

Suddi Udaya
error: Content is protected !!