April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೌತಡ್ಕ ಪಾರ್ಕಿಂಗ್ ಸ್ಥಳದಲ್ಲಿ ನೆಟ್ಟ ಗಿಡಗಳ ಬೇಲಿ ತೆರವು: ಸಂರಕ್ಷಿಸಲಾಗಿದ್ದ ಗಿಡಗಳನ್ನು ಸಾಕು ಪ್ರಾಣಿಗಳು ತಿಂದು ನಾಶ

ಕೊಕ್ಕಡ: ಇಲ್ಲಿಯ ಸೌತಡ್ಕ ಪಾರ್ಕಿಂಗ್ ಸ್ಥಳದಲ್ಲಿ ನೆಟ್ಟ ಗಿಡಗಳಿಗೆ ಬೇಲಿಯನ್ನು ಅಳವಡಿಸಿದ್ದು, ಏಕಾಏಕಿ ಆ ಬೇಲಿಯನ್ನು ಯಾರೋ ಕಿತ್ತೆಸೆದ ಘಟನೆ ಜ.11 ರಂದು ನಡೆದಿದೆ.

ಪರಿಸರ ದಿನಾಚರಣೆಯ ಅಂಗವಾಗಿ ಶ್ರೀ ಕ್ಷೇತ್ರ ಸೌತಡ್ಕದಲ್ಲಿ ಸುಮಾರು 250ಕ್ಕೂ ಹೆಚ್ಚಿನ ನೆಟ್ಟ ಗಿಡಗಳಿಗೆ ಬೇಲಿ ಹಾಕಿ ಸಂರಕ್ಷಿಸಲಾಗಿತ್ತು ಆದರೆ ಯಾರೋ ಬೇಲಿಯನ್ನು ಕಿತ್ತೆಸೆದಿದ್ದು, ಸಂರಕ್ಷಿಸಲಾಗಿದ್ದ ಗಿಡಗಳನ್ನು ಆಡು, ದನಗಳು ಹಾಗೂ ಇತರ ಸಾಕು ಪ್ರಾಣಿಗಳು ತಿಂದು ನಾಶ ಮಾಡಿದೆ.

ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಪ್ರಶಾಂತ್ ಪೂವಾಜೆ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಿರಿಯ ಗುಮಾಸ್ತ ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟ ಇತರನ್ನು ಸಂಪರ್ಕಿಸಿದಾಗ ಇದರ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

Related posts

ಬೆಳ್ತಂಗಡಿ: ಅಜ್ಜಿಯನ್ನುಕೊಲೆ ಮಾಡಿ ಚಿನ್ನಾಭರಣ ದರೋಡೆ ಪ್ರಕರಣ: ಬಂಧಿತನಾಗಿದ್ದ ಆರೋಪಿ ಅಶೋಕ್ ಅಸೌಖ್ಯದಿಂದ ಸಾವು

Suddi Udaya

ನಿಡ್ಲೆ : ಪ್ರತಿಭಾ ಪುರಸ್ಕಾರ ಹಾಗೂ ಯಕ್ಷಗಾನ ಕಾರ್ಯಕ್ರಮ: ಪುತ್ತೂರಿನ ಅರುಣ್ ಪುತ್ತಿಲ , ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಕಲ್ಮಂಜ: ಮಾಣಿಂಜೆ ಅಣೆಕಟ್ಟುವಿನಲ್ಲಿ ಸಿಕ್ಕಿಹಾಕಿಕೊಂಡ ಮರದ ದಿಮ್ಮಿಗಳು : ತೆರವುಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ ಪುದುವೆಟ್ಟು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಸಿಎಂ ಸಿದ್ದರಾಮಯ್ಯರವರಿಗೆ ಮನವಿ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯ ಹುಟ್ಟು ಹಬ್ಬ ಮತ್ತು ವಿಶ್ವ ಯುವ ಕೌಶಲ್ಯ ದಿನಾಚರಣೆ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya
error: Content is protected !!