37.6 C
ಪುತ್ತೂರು, ಬೆಳ್ತಂಗಡಿ
January 13, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತೆಕ್ಕಾರು ಶ್ರೀ ಗೋಪಾಲ ಕೃಷ್ಣ ದೇವರಿಗೆ ವಿಶೇಷ ಪೂಜೆ: ಶಾಸಕ ಹರೀಶ್ ಪೂಂಜರಿಂದ ಅಭಿವೃದ್ಧಿಕಾರ್ಯದ ಬಗ್ಗೆ ಸಭೆ

ತೆಕ್ಕಾರು: ಇಲ್ಲಿಯ ಶ್ರೀ ಗೋಪಾಲ ಕೃಷ್ಣ ದೇವರಿಗೆ ಪ್ರತಿ ತಿಂಗಳ ರೋಹಿಣಿ ನಕ್ಷತ್ರದ ದಿನದಂದು ನಡೆಯುವ ಹಣ್ಣು ಕಾಯಿ ಸೇವೆ, ವಿಶೇಷ ಪೂಜೆ ಜ.11 ರಂದು ನಡೆಯಿತು.


ಅನ್ಯರ ಪಾಲಗಿ ಅವನತಿಹೊಂದಿದ್ದ ದೇವಾಲಯವು ಹಲವು ವರುಷಗಳ ಶ್ರಮದ ಫಲವಾಗಿ ಇದೀಗ ಮತ್ತೆ ಭವ್ಯವಾದ
ದೇವಾಲಯ ಪುನರುತ್ಥಾನದ ಕಾರ್ಯ ಭರದಿಂದ ಸಾಗುತ್ತಿದ್ದು, ಈಗಾಗಲೇ ಗರ್ಭಗುಡಿಯ ಕೆಲಸ ಅಂತಿಮ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಹೊರಾಂಗಣದ ಕೆಲಸ ಪ್ರಾರಂಭವಾಗುತ್ತಿರುವ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯದ ಪ್ರಧಾನ ತಂತ್ರಿವರ್ಯರಾದ ನೀಲೇಶ್ವರ ಉಚ್ಚಿಲತ್ತಾಯ‌ ಪದ್ಮನಾಭ ತಂತ್ರಿಗಳು ಆಗಮಿಸಿ ನಿರ್ಮಾಣ ಕಾರ್ಯ ವೀಕ್ಷಣೆ ಮಾಡಿ ಮುಂದಿನ ಹಂತದ ನಿರ್ಮಾಣ ಕೆಲಸಗಳ ಬಗ್ಗೆ ಶಿಲ್ಪಿ ಉಮೇಶ್ ಅವರಿಗೆ ಮಾರ್ಗದರ್ಶನ ನೀಡಿದರು.

ನಂತರ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭಾಗವಹಿಸಿ ಜೀರ್ಣೋದ್ಧಾರ ನಂತರ ಪ್ರತಿಷ್ಠೆ ಸಂದರ್ಭದಲ್ಲಿ ವಾಹನ ನಿಲುಗಡೆ ಅನ್ನ ಸಂತರ್ಪಣೆಗೆ ಸ್ಥಳಾವಕಾಶ ಕಲ್ಪಿಸುವ ಕುರಿತು ಊರವರೊಂದಿಗೆ ಸಮಾಲೋಚನೆ ನಡೆಸಿ ಶ್ರೀ ಗೋಪಾಲಕೃಷ್ಣನ ಈ ಸನ್ನಿಧಿಯು ವಿಶೇಷವಾದ ಪರಿಕಲ್ಪನೆಯೊಂದಿಗೆ ಪ್ರತಿಷ್ಠಾಪನೆ ಮಾಡೋಣವೆಂದು ತಿಳಿಸಿದರು. ಅಭಿವೃದ್ಧಿಕಾರ್ಯದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.


ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನವೀನ್ ನೆರಿಯ, ಟ್ರಸ್ಟ್ ಸಂಚಾಲಕ ಲಕ್ಷ್ಮಣ್ ಬಟ್ರೆಬೈಲು, ಗೌರವಾಧ್ಯಕ್ಷರಾದ ತುಕಾರಾಮ ನಾಯಕ್ , ಟ್ರಸ್ಟಿಗಳು, ಜೀರ್ಣೋದ್ಧಾರ ಸಮಿತಿಯ ಪ್ರಮುಖರು, ಉಪಾಧ್ಯಕ್ಷರಾದ, ಅನಂತಪ್ರಾಸಾದ್, ಕೇಶವ ಪೂಜಾರಿ, ಧರ್ಣಪ್ಪ ಪೂಜಾರಿ, ಬಾಬುಮೂಲ್ಯ, ಜಯಾನಂದ ಕಲ್ಲಾಪು, ಚಿದಾನಂದ ಪೊರ್ಕಳ, ಊರವರು ಉಪಸ್ಥಿತರಿದ್ದರು.

Related posts

ಬ್ರಹ್ಮಾನಂದ ಶ್ರೀ ಯವರಿಂದ ಕನ್ಯಾಡಿ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ವೇಣೂರು: ನವೋದಯ ಚೈತನ್ಯ ವಿಮಾ ಮೊತ್ತದ ಚೆಕ್ ವಿತರಣೆ

Suddi Udaya

ಉಜಿರೆ: ಎಸ್.ಡಿ.ಎಂ.ವಸತಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪ.ಪೂ. ವಿದ್ಯಾರ್ಥಿಗಳ ಸೇರ್ಪಡೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ತುಮಕೂರು ಬೆಳ್ತಂಗಡಿಯ ಮೂವರ ಕೊಲೆ ಪ್ರಕರಣ; 7 ದಿನದ ಬಳಿಕ ಮನೆ ತಲುಪಿದ ಮೂವರ ಮೃತದೇಹ

Suddi Udaya

ಮಲವಂತಿಗೆ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya

ಕನ್ಯಾಡಿ-I ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಸಂಸತ್ ಚುನಾವಣೆ

Suddi Udaya
error: Content is protected !!