ಬಳಂಜ: ಶ್ರೀ ಶಾಸ್ತಾರ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನ ಸಿರಿಗಳ ಕ್ಷೇತ್ರ ಬದಿನಡೆ ಬಳಂಜದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ನೇಮೋತ್ಸವ ಜ. 13 ರಂದು ನಡೆಯಿತು.
ಬೆಳಿಗ್ಗೆ ತೋರಣ ಮುಹೂರ್ತ, ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜೆ, ಶನೈಶ್ಚರ ಶಾಂತಿ ಹೋಮ, ಸಾರ್ವಜನಿಕ ಶನೈಶ್ಚರ ಪೂಜೆ ನಡೆಯಿತು.
ಸಂಜೆ ದೊಡ್ಡ ರಂಗಪೂಜೆ, ದುರ್ಗಾ ಪೂಜೆ, ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಬಳಂಜ ಸದಸ್ಯರಿಂದ ಕುಣಿತ ಭಜನೆ, ಪಂಚಶ್ರೀ ಮಹಿಳಾ ಭಜನಾ ಮಂಡಳಿ ಬಳಂಜ ಹಾಗೂ ಸ್ವಾತಿ ಮ್ಯೂಸಿಕಲ್ ಕಾರ್ಯಾಣ ಭಜನಾ ಕಾರ್ಯಕ್ರಮ, ದೇವರ ಬಲಿ ಉತ್ಸವ, ಆಶ್ಲೇಷ ಬಲಿ, ಸಾರ್ವಜನಿಕ ಅನ್ನ ಸಂತರ್ಪಣೆ, ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.
ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮರ್ಮದರ್ಶಿ ಜಯ ಸಾಲಿಯಾನ್ ಮತ್ತು ಊರ ಪರವೂರ ಭಕ್ತರು ಉಪಸ್ಥಿತರಿದ್ದರು.