23.3 C
ಪುತ್ತೂರು, ಬೆಳ್ತಂಗಡಿ
April 19, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ : ತ್ರಿ ಸ್ಟಾರ್ ವೈನ್ಸ್ ಶಾಪ್ ಕಳ್ಳತನ ಪ್ರಕರಣ: ಪ್ರಮುಖ ಆರೋಪಿ ಬೆಳ್ತಂಗಡಿ ಪೊಲೀಸ್ ಕಸ್ಟಡಿಗೆ

ಬೆಳ್ತಂಗಡಿ : ಬೆಳ್ತಂಗಡಿ ವೈನ್ಸ್ ಶಾಪ್ ಕಳ್ಳತನ ಪ್ರಕರಣದ ಆರೋಪಿಗಳಿಬ್ಬರು ಉಡುಪಿ ಜಿಲ್ಲೆಯ ಕುಂದಾಪುರ ಬ್ಯಾಂಕ್ ಕಳ್ಳತನ ಯತ್ನ ಪ್ರಕರಣದಲ್ಲಿ ಉಡುಪಿಯ ಹಿರಿಯಡ್ಕ ಜೈಲಿನಲ್ಲಿದ್ದು. ಬೆಳ್ತಂಗಡಿ ಪೊಲೀಸರು ಕಳ್ಳತನ ಪ್ರಕರಣದ ತನಿಖೆಗಾಗಿ ಪ್ರಮುಖ ಆರೋಪಿ‌ಯಾದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಇಂದ್ರನಗರ ನಿವಾಸಿ ಮೊಹಮ್ಮದ್ ಹುಸೇನ್ (22) ಎಂಬಾತನನ್ನು ಬೆಳ್ತಂಗಡಿ ಕೋರ್ಟ್ ನಿಂದ ಬಾಡಿ ವಾರೆಂಟ್ ಪಡೆದು ಜ.13 ರಂದು ಬೆಳಗ್ಗೆ ಉಡುಪಿಯ ಹಿಡಿಯಡ್ಕ ಜೈಲಿನಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಯನ್ನು (ಎರಡು ದಿನ)ಜ.13 ಮತ್ತು ಜ.14 ರಂದು ಬೆಳ್ತಂಗಡಿ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಮಾಡಿದೆ‌.

ಆರೋಪಿಯನ್ನು ಪೊಲೀಸರು ಕಳ್ಳತನ ಮಾಡಿದ ವೈನ್ಸ್ ಶಾಪ್ ಗೆ ಕರೆತಂದು ಮಹಜರು ನಡೆಸಿದರು.

ಪ್ರಕರಣದ ವಿವರ: ಬೆಳ್ತಂಗಡಿ ಬಸ್ ನಿಲ್ದಾಣದ ಶ್ರೀ ಗುರುನಾರಾಯಣ ಕಟ್ಟಡದ ನೆಲ ಮಹಡಿಯಲ್ಲಿರುವ ತ್ರಿ ಸ್ಟಾರ್ ವೈನ್ಸ್ ಗೆ ಬೀಗ ಒಡೆದು ನುಗ್ಗಿದ ಕಳ್ಳರು ಸುಮಾರು ಒಂಬತ್ತು ಸಾವಿರ ಹಣ ಹಾಗೂ ಬಿಯಾರ್ ಬಾಟಲಿಗಳನ್ನು ಕಳ್ಳತನ ಮಾಡಿದ ಘಟನೆ ಆ.13 ರಂದು ಭಾನುವಾರ ರಾತ್ರಿ ಸಂಭವಿಸಿತ್ತು.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.ಈ ಬಳಿಕ ಆರೋಪಿಗಳಿಬ್ಬರು ಉಡುಪಿ ಜಿಲ್ಲೆಯ ಕುಂದಾಪುರ ಕರ್ನಾಟಕ ಬ್ಯಾಂಕ್ ಗೆ ಅ.16 ರಂದು ಕನ್ನ ಹಾಕುವಾಗ ಕುಂದಾಪುರ ಪೊಲೀಸರಿಗೆ ರೆಡ್ ಹ್ಯಾಂಡ್ ಅಗಿ ಮೊಹಮ್ಮದ್ ಹುಸೇನ್ ಮತ್ತು ಅಪ್ರಾಪ್ತ ಬಾಲಕನೊಬ್ಬ ಸಿಕ್ಕಿಬಿದ್ದು ಜೈಲುಪಾಲಾಗಿದ್ದರು.ಪೊಲೀಸರ ವಿಚಾರ ವೇಳೆ ಬೆಳ್ತಂಗಡಿ ವೈನ್ಸ್ ಶಾಪ್ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು.

Related posts

ನಾರಾವಿ ಆದಿತ್ಯ ಫ್ಯಾಶನ್ ನಲ್ಲಿ ಆಷಾಢ ಡಿಸ್ಕೌಂಟ್ ಸೇಲ್: ಈ ಆಫರ್ ಆಗಷ್ಟ್ 10 ರಿಂದ 20 ರವರೆಗೆ ಮಾತ್ರ

Suddi Udaya

ಎಸ್ ಡಿ ಎಮ್ ವಸತಿ ಪಿ ಯು ಕಾಲೇಜಿನ ವಿದ್ಯಾರ್ಥಿಗಳಿಂದ ಡ್ರಾಗನ್ ತೋಟಕ್ಕೆ ಶಿಕ್ಷಣ ಪ್ರವಾಸ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಕೊನೆಗೊಳ್ಳಲು ಕೊಲ್ಲೂರು ಹಾಗೂ ಕದ್ರಿ ದೇವಸ್ಥಾನದಿಂದ ಧಮ೯ ಸಂರಕ್ಷಣಾ ಯಾತ್ರೆ

Suddi Udaya

ಹೊಸಂಗಡಿ : ಪ್ರಗತಿಪರ ಕೃಷಿಕ ರಾಮಪ್ಪ ಪೂಜಾರಿ ನಿಧನ

Suddi Udaya

ಅನ್ನಭಾಗ್ಯಕ್ಕೆ ಅಕ್ಕಿ ನೀಡದ ಕೇಂದ್ರ ಸರಕಾರದ ವಿರುದ್ಧ ಅನ್ನದ ತಟ್ಟೆ ಬಡಿದು ಬ್ಲಾಕ್ ಕಾಂಗ್ರೆಸ್‌ನಿಂದ ಪ್ರತಿಭಟನೆ

Suddi Udaya

ಅ.13: ಯಕ್ಷಭಾರತಿ ಕನ್ಯಾಡಿ ಸಂಸ್ಥೆಯ ವತಿಯಿಂದ ಕನ್ಯಾಡಿಯಲ್ಲಿ ಬೃಹತ್ ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣೆ ಶಿಬಿರ

Suddi Udaya
error: Content is protected !!