ಬೆಳ್ತಂಗಡಿ: ಕಳೆದ 8 ವರ್ಷಗಳಿಂದ ಚಿನ್ನ ಆಭರಣಗಳಲ್ಲಿ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುತ್ತಾ ಬರುತ್ತಿರುವ ಪೃಥ್ವಿ ಜುವೆಲ್ಸ್ ನಲ್ಲಿ ಜ.13 ರಂದು ಕಂಠಿ ಉತ್ಸವಕ್ಕೆ ಚಾಲನೆ ನೀಡಿ ಹಾಗೂ ತಾಲೂಕಿನ 5 ಮಂದಿ ಕೃಷಿ ಸಾಧಕರಿಗೆ ” ಶ್ರೇಷ್ಠ ಕೃಷಿ ಸಾಧಕ ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಶ್ರೀ ಕ್ಷೇ.ಧ.ಗ್ರಾ.ಯೋ. ಯೋಜನಾಧಿಕಾರಿ ಸುರೇಂದ್ರ ರವರು ಉಪಸ್ಥಿತರಿದ್ದು ಕಂಠಿ ಉತ್ಸವಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕಿನ 5 ಮಂದಿ ಕೃಷಿ ಸಾಧಕರಾದ ಜಗದೀಶ್ ಪ್ರಸಾದ್ ಮುಂಡಾಜೆ (ಸಮಗ್ರ ಕೃಷಿ), ಶಾಮ್ ಸುಂದರ್ ಭಟ್ ಬಲೆಂಜ (ಜೇನು ಕೃಷಿ), ಶ್ರೀಕೃಷ್ಣ ಭಟ್ ಲಾಯಿಲ (ಪಾರಂಪರಿಕ ಕೃಷಿ), ಈಶ್ವರ್ ಭಟ್ ಅತ್ತಾಜೆ(ಪಾರಂಪರಿಕ ಕೃಷಿ), ಜಯ ನಾರಾಯಣ ಉಪಾಧ್ಯಾಯ (ಸಮಗ್ರ ಕೃಷಿ) ರವರುಗಳನ್ನು “ಶ್ರೇಷ್ಠ ಕೃಷಿ ಸಾಧಕ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪ್ರಬಂಧಕ ಅಶೋಕ್ ಬಂಗೇರ ಪ್ರಸ್ತಾವಿಸಿ ಸ್ವಾಗತಿಸಿದರು. ಸಿಬ್ಬಂದಿಗಳು ಪ್ರಾರ್ಥಿಸಿದರು. ರೋಹಿತ್ ನಿರೂಪಿಸಿ ಧನ್ಯವಾದವಿತ್ತರು.
ಕಂಠಿ ಉತ್ಸವವು ಜ.13 ರಿಂದ ಫೆ. 13 ರವರೆಗೆ ನಡೆಯಲಿದ್ದು ವಿಶಿಷ್ಟ ಕರಿಮಣಿ ಆಭರಣಗಳು ಹಾಗೂ ಹಳೆಯ ಚಿನ್ನದ ವಿನಿಮಯದಲ್ಲಿ 151 ರೂಪಾಯಿಗಳ ಅಧಿಕ ಕೊಡುಗೆಯನ್ನು ಪಡೆಯಬಹುದು.