37.2 C
ಪುತ್ತೂರು, ಬೆಳ್ತಂಗಡಿ
April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆಯಲ್ಲಿ ಎನ್ನೆಸ್ಸೆಸ್ ವತಿಯಿಂದ ರಾಷ್ಟ್ರೀಯ ಯುವದಿನ ಸಂಪನ್ನ

ಉಜಿರೆ: ನಮ್ಮ ದೇಶದ ಸಂಸ್ಕೃತಿ, ಆಧ್ಯಾತ್ಮಿಕತೆಯ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿ ಭಾರತದ ಬಗ್ಗೆ ಕೀಳು ಭಾವನೆ ಹೊಂದಿದ್ದ ಪಾಶ್ಚಾತ್ಯರು ನಮ್ಮೆಡೆಗೆ ಹೆಮ್ಮೆಯಿಂದ ತಿರುಗಿ ನೋಡುವಂತೆ ಮಾಡಿದವರು ಸ್ವಾಮಿ ವಿವೇಕಾನಂದರು.

ಅಜ್ಞಾನವೇ ದೌರ್ಬಲ್ಯ ; ದೌರ್ಬಲ್ಯವೇ ಸೋಲಿನ ಮೂಲ. ಆದ್ದರಿಂದ ಸರಿಯಾದ ಶಿಕ್ಷಣವನ್ನು ಪಡೆದು ಪ್ರಬುದ್ಧರಾಗಬೇಕು ಹಾಗೂ ಹಕ್ಕಿಯೊಂದು ಸರಿಯಾಗಿ ಹಾರಬೇಕೆಂದರೆ ಅದರ ಎರಡೂ ರೆಕ್ಕೆಗಳು ಬಲಿಷ್ಠವಾಗಿರಬೇಕು. ಒಂದು ರೆಕ್ಕೆ ಪುರುಷನಾದರೆ ಇನ್ನೊಂದು ಸ್ತ್ರೀ ಆಗಿರಬೇಕು. ಸ್ತ್ರೀ ಸಮಾನತೆಗೆ ಮಹತ್ವ ಕೊಡುವ ದೇಶ ಮಾತ್ರ ಸರ್ವಾಂಗೀಣ ಪ್ರಗತಿ ಸಾಧಿಸಬಹುದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು.

ಯುವಶಕ್ತಿ ದೇಶದ ಶಕ್ತಿ. ಸತ್ಯ ಮತ್ತು ಧೈರ್ಯದಿಂದ ಸಾಧನೆ ಮಾಡಬೇಕು. ವಿದ್ಯಾರ್ಥಿ ಸಮುದಾಯ ದುಶ್ಚಟ ಮತ್ತು ಆಕರ್ಷಣೆಗಳಿಂದ ವಿಮುಖರಾಗಿ ಸ್ವಾಮಿ ವಿವೇಕಾನಂದರು ಯುವಕರಿಗೆ ನೀಡಿದ ಅದ್ಭುತ ಸಂದೇಶಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಲ್ಲಿ ತಮ್ಮ ಹಾಗೂ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡಬಹುದು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಗ್ರಂಥಪಾಲಕ ಮನೋಹರ ಶೆಟ್ಟಿ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ರಾಷ್ಟ್ರೀಯ ಯುವದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಯುವದಿನದ ಸಂದೇಶ ನೀಡಿದರು.

ಸದ್ಭಾವನೆಯ ಗೋಡೆಯಾದ ಎಸ್ ಡಿ ಎಂ ವಾಲ್ ಆಫ್ ಗುಡ್ ವಿಲ್ ಇದಕ್ಕೆ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ , ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ , ಗ್ರಂಥಪಾಲಕ ಮನೋಹರ ಶೆಟ್ಟಿ , ಘಟಕದ ನಾಯಕ ಆದಿತ್ಯ ವಿ , ನಾಯಕಿ ಪ್ರಾಪ್ತಿ ಗೌಡ ಹಾಗೂ ಸ್ವಯಂ ಸೇವಕರು ಅಗತ್ಯ ವಸ್ತುಗಳನ್ನು ನೀಡಿದರು.
ಯುವದಿನದ ಅಂಗವಾಗಿ ಸ್ವಯಂ ಸೇವಕರು ಉಜಿರೆ ಪರಿಸರದ ಸ್ವಚ್ಛತಾ ಕಾರ್ಯವನ್ನು ಸಹ ಮಾಡಿದರು.

ಸ್ವಯಂ ಸೇವಕರಾದ ರಾಶಿಕ ಸ್ವಾಗತಿಸಿ , ವಿನೋದ್ ವಂದಿಸಿದರು. ಮೌಲ್ಯ ನಿರೂಪಿಸಿದರು

Related posts

ಓಡಿಲ್ನಾಳ ಸ.ಉ.ಪ್ರಾ. ಶಾಲಾ ವಿದ್ಯಾರ್ಥಿ ಮಂತ್ರಿಮಂಡಲ ರಚನೆ

Suddi Udaya

ವಾಯ್ಸ್ ಆಫ್ ಮಲ್ನಾಡ್ ಏರ್ಪಡಿಸಿದ್ದ ಗಾಯನ ಸ್ಪರ್ಧೆಯಲ್ಲಿ ಫೈನಲ್ ಹಂತ ತಲುಪಿದ ಬಂದಾರುವಿನ ಕುಸುಮ ಎಂ ಎಸ್

Suddi Udaya

ಪೆರ್ಲ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಾಧವ ಗೌಡ ಖಂಡಿಗ ರವರಿಂದ ಹಣ್ಣು ಹಂಪಲು ಗಿಡ ವಿತರಣೆ

Suddi Udaya

ಚಾರ್ಮಾಡಿ : ಮಿನಿ ಬಸ್ ಪಲ್ಟಿ, ನಾಲ್ಕು ಮಂದಿ ಗಂಭೀರ ಹಲವರಿಗೆ ಗಾಯ

Suddi Udaya

ಸುಲ್ಕೇರಿ ಅ.ಹಿ. ಪ್ರಾ. ಶಾಲೆ, ಶ್ರೀರಾಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುದ್ಧಜಲ ಅಭಿಯಾನ: ಡಾ| ಡಿ ವೀರೇಂದ್ರ ಹೆಗ್ಗಡೆಯವರಿಂದ ಕರಪತ್ರ ಬಿಡುಗಡೆ

Suddi Udaya
error: Content is protected !!