ಕಡಿರುದ್ಯಾವರ : ದ. ಕ. ಜಿ. ಪಂ ಹಿ. ಪ್ರಾ ಶಾಲೆ ಕಡಿರುದ್ಯಾವರ ದಲ್ಲಿ ಶಾಲಾ ಎಸ್.ಡಿ.ಎಮ್.ಸಿ ಹಾಗೂ ಪೋಷಕರ ಸಭೆಯು ಜ.11 ರಂದು ನಡೆಸಲಾಯಿತು.
ಈ ವೇಳೆ ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಊರಿನವರ ಸಹಕಾರದಿಂದ ಶಾಲೆಗೆ ಹಾಗೂ ಮಕ್ಕಳಿಗೆ ವಿವಿಧ ವಸ್ತುಗಳನ್ನ ಕೊಡುಗೆಯಾಗಿ ನೀಡಲಾಯಿತು..
ದಾನಿಗಳಾದ ನವೀನ್ ಕಾನರ್ಪ ರವರು ಮಕ್ಕಳಿಗೆ ಐಡಿ ಕಾರ್ಡ್, ರೇಖಾ ಅರಮನೆ ಹಿತ್ಲು ರವರು ಮಕ್ಕಳಿಗೆ ಟೈ ಹಾಗೂ ಬೆಲ್ಟ್, ಸತೀಶ್ ಗೌಡ ಎರ್ಮಾಲ್ ಪಾಲ್ಕೆ, ಪವಿತ್ರಗೌಡ ಸಾಲ್ ಪಿಲ, ರೂಪಲತಾ ಗೌಡ ಸಾಲ್ ಪಿಲ ರವರು ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್, ಚಂದ್ರಶೇಖರ್ ಶ್ರೀಮತಿ ಸವಿತಾ ಗಜಂತೋಡಿ ಭಾರತೀಯ ಸೈನಿಕರು ಶಾಲೆಗೆ ಗಾಡ್ರೇಜ್ ಬೀರು ನೀಡಿದರು.
ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಶ್ರೀನಿವಾಸ್ ಗೌಡ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಸರಸ್ವತಿ, ಸದ್ಯಸರು, ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಪ್ರದೀಪ್ ಎಮ್, ಶಾಲೆಯ ಹಿರಿಯ ವಿದ್ಯಾರ್ಥಿ ನಾರಾಯಣ , ಶಾಲಾ ಶಿಕ್ಷಕಿಯರಾದ ಶ್ರೀಮತಿ ಅಸ್ಮಿತಾ , ಶ್ರೀಮತಿ ನಮಿತಾ, ಕುಮಾರಿ ಅನಿತಾ, ಶ್ರೀಮತಿ ಕೀರ್ತಿಕಾ ಹಾಗೂ ಶಾಲಾ ಮಕ್ಕಳ ಪೋಷಕರು, ಮಕ್ಕಳು ಉಪಸ್ಥಿತರಿದ್ದರು.