ಬೆಳ್ತಂಗಡಿ: ಗೋಕರ್ಣನಾಥ ಕೋ- ಅಪರೇಟಿವ್ ಬ್ಯಾಂಕ್ ಇದರ ಚುನಾವಣೆಯಲ್ಲಿ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಕಾರ್ಯಕಾರಿ ಸದಸ್ಯ, ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ, ಬಿಲ್ಲವ ಸಮಾಜದ ಕ್ರಿಯಾಶೀಲ ಸಂಘಟಕ ಹರೀಶ್ ಕೆ ಪೂಜಾರಿ ಇವರು ಸ್ಪರ್ದಿಸಿ ಗೆಲುವು ಸಾಧಿಸಿ ನಿರ್ದೇಶಕರಾಗಿ ಪುನರಾಯ್ಕೆ ಗೊಂಡಿದ್ದಾರೆ.
ಬಳಂಜ ಗ್ರಾಮದ ಬೈಲಬರಿ ನಿವಾಸಿಯಾಗಿರುವ ಇವರು ಮಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಬಳಂಜ ಬೊಂಟ್ರೋಟ್ಟುಗುತ್ತು ದೇವಸ್ಥಾನದ ಅಧ್ಯಕ್ಷರಾಗಿ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.