ತೆಕ್ಕಾರು: ಇಲ್ಲಿಯ ಶ್ರೀ ಗೋಪಾಲ ಕೃಷ್ಣ ದೇವರಿಗೆ ಪ್ರತಿ ತಿಂಗಳ ರೋಹಿಣಿ ನಕ್ಷತ್ರದ ದಿನದಂದು ನಡೆಯುವ ಹಣ್ಣು ಕಾಯಿ ಸೇವೆ, ವಿಶೇಷ ಪೂಜೆ ಜ.11 ರಂದು ನಡೆಯಿತು.
ಅನ್ಯರ ಪಾಲಗಿ ಅವನತಿಹೊಂದಿದ್ದ ದೇವಾಲಯವು ಹಲವು ವರುಷಗಳ ಶ್ರಮದ ಫಲವಾಗಿ ಇದೀಗ ಮತ್ತೆ ಭವ್ಯವಾದ
ದೇವಾಲಯ ಪುನರುತ್ಥಾನದ ಕಾರ್ಯ ಭರದಿಂದ ಸಾಗುತ್ತಿದ್ದು, ಈಗಾಗಲೇ ಗರ್ಭಗುಡಿಯ ಕೆಲಸ ಅಂತಿಮ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಹೊರಾಂಗಣದ ಕೆಲಸ ಪ್ರಾರಂಭವಾಗುತ್ತಿರುವ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯದ ಪ್ರಧಾನ ತಂತ್ರಿವರ್ಯರಾದ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಆಗಮಿಸಿ ನಿರ್ಮಾಣ ಕಾರ್ಯ ವೀಕ್ಷಣೆ ಮಾಡಿ ಮುಂದಿನ ಹಂತದ ನಿರ್ಮಾಣ ಕೆಲಸಗಳ ಬಗ್ಗೆ ಶಿಲ್ಪಿ ಉಮೇಶ್ ಅವರಿಗೆ ಮಾರ್ಗದರ್ಶನ ನೀಡಿದರು.
ನಂತರ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭಾಗವಹಿಸಿ ಜೀರ್ಣೋದ್ಧಾರ ನಂತರ ಪ್ರತಿಷ್ಠೆ ಸಂದರ್ಭದಲ್ಲಿ ವಾಹನ ನಿಲುಗಡೆ ಅನ್ನ ಸಂತರ್ಪಣೆಗೆ ಸ್ಥಳಾವಕಾಶ ಕಲ್ಪಿಸುವ ಕುರಿತು ಊರವರೊಂದಿಗೆ ಸಮಾಲೋಚನೆ ನಡೆಸಿ ಶ್ರೀ ಗೋಪಾಲಕೃಷ್ಣನ ಈ ಸನ್ನಿಧಿಯು ವಿಶೇಷವಾದ ಪರಿಕಲ್ಪನೆಯೊಂದಿಗೆ ಪ್ರತಿಷ್ಠಾಪನೆ ಮಾಡೋಣವೆಂದು ತಿಳಿಸಿದರು. ಅಭಿವೃದ್ಧಿಕಾರ್ಯದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನವೀನ್ ನೆರಿಯ, ಟ್ರಸ್ಟ್ ಸಂಚಾಲಕ ಲಕ್ಷ್ಮಣ್ ಬಟ್ರೆಬೈಲು, ಗೌರವಾಧ್ಯಕ್ಷರಾದ ತುಕಾರಾಮ ನಾಯಕ್ , ಟ್ರಸ್ಟಿಗಳು, ಜೀರ್ಣೋದ್ಧಾರ ಸಮಿತಿಯ ಪ್ರಮುಖರು, ಉಪಾಧ್ಯಕ್ಷರಾದ, ಅನಂತಪ್ರಾಸಾದ್, ಕೇಶವ ಪೂಜಾರಿ, ಧರ್ಣಪ್ಪ ಪೂಜಾರಿ, ಬಾಬುಮೂಲ್ಯ, ಜಯಾನಂದ ಕಲ್ಲಾಪು, ಚಿದಾನಂದ ಪೊರ್ಕಳ, ಊರವರು ಉಪಸ್ಥಿತರಿದ್ದರು.