36.1 C
ಪುತ್ತೂರು, ಬೆಳ್ತಂಗಡಿ
January 14, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಚೆಕ್ ಅಮಾನ್ಯ ಪ್ರಕರಣ ಆರೋಪಿ ಖುಲಾಸೆ

ಬೆಳ್ತಂಗಡಿ: ಆರೋಪಿ ಕಡಿರುದ್ಯಾವರ ಗ್ರಾಮದ ಸುಂದರ ಗೌಡ ಇವರು ಉಜಿರೆ ಗ್ರಾಮದ ಪಣಿಕ್ಕಲ್ ಮನೆಯ ಚಂದ್ರಶೇಖರ ಇವರಿಂದ ಐದು ಲಕ್ಷದ ಮೂವತ್ತು ಸಾವಿರ ಪಡಕೊಂಡಿದ್ದು, ಸದ್ರಿ ಸಾಲವನ್ನು ಮರುಪಾವತಿ ಮಾಡಲು ರೂ .5,30,000 ಚೆಕ್ಕನ್ನು ಚಂದ್ರಶೇಖರ ಇವರಿಗೆ ನೀಡಿದ್ದು, ಸದ್ರಿ ಚೆಕ್ಕನ್ನು ನಗದೀಕರಣಕ್ಕಾಗಿ ಬ್ಯಾಂಕ್‌ಗೆ ಹಾಜರು ಪಡಿಸಿದಾಗ ಖಾತೆಯಲ್ಲಿ ಸಾಕಷ್ಟು ಹಣವಿಲ್ಲವೆಂದು ಹಿಂದಿರುಗಿಸಿರುತ್ತಾರೆ. ಬೆಳ್ತಂಗಡಿ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್. ಸಿ. ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸಲ್ಲಿಸಿ, ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪ ಸಾಬೀತು ಆಗದೇ ಇರುವುದರಿಂದ ಆರೋಪಿಯನ್ನು ದೋಷ ಮುಕ್ತಗೊಳಿಸಿ ಜ. 04 ರಂದು ನ್ಯಾಯಾಧೀಶರಾದ ಮನು ಬಿ ಕೆ ಇವರು ತೀರ್ಪು ನೀಡಿರುತ್ತಾರೆ.

ಆರೋಪಿಯ ಪರವಾಗಿ ವಕೀಲರಾದ ಗಣೇಶ್ ಗೌಡ ಮತ್ತು ಪ್ರಶಾಂತ್ ಎಮ್ ವಾದಿಸಿದ್ದರು.

Related posts

ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿಯಲ್ಲಿ ಈದುಲ್ ಅದಾ ಸಾಮೂಹಿಕ ಪ್ರಾರ್ಥನೆ

Suddi Udaya

11ನೇ ಶತಮಾನ ಕ್ರಿ.ಶ. 1260 ರಲ್ಲಿ ನಿರ್ಮಾಣವಾದ ಕ್ಷೇತ್ರ: ಮೇ 3ರಿಂದ ನಾರಾವಿ ಬಸದಿಯ ಧಾಮ ಸಂಪ್ರೋಕ್ಷಣೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಕಣಿಯೂರು ಮಹಾಶಕ್ತಿಕೇಂದ್ರದ ಸಭೆ

Suddi Udaya

ಕೊಯ್ಯೂರು ಸ.ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ ಸಂಘ ರಚನೆ

Suddi Udaya

ಆರಂಬೋಡಿ: ರಸ್ತೆಯ ಬದಿ ನಿಲ್ಲಿಸಿದ ಬೈಕ್ ಕಳವು

Suddi Udaya

ಮಿನಿ ವಿಮಾನ ನಿಲ್ದಾಣ: ಧರ್ಮಸ್ಥಳ ನೀರಚಿಲುಮೆ ಬಳಿ ಜಾಗ ಪರಿಶೀಲನೆ ನಡೆಸಿದ ಅಧಿಕಾರಿಗಳು

Suddi Udaya
error: Content is protected !!