ಬೆಳ್ತಂಗಡಿ: ತಾಲೂಕು ಯುವಜನ ಒಕ್ಕೂಟದ ಮಹಾಸಭೆಯು ಜ.12 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ, ಒಕ್ಕೂಟದ ಅಧ್ಯಕ್ಷ ರಮಾನಂದ ಸಾಲಿಯಾನ್ ಮುಂಡೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ 2025 -26 ನೇ ಸಾಲಿನ ನೂತನ ಅಧ್ಯಕ್ಷರು ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ರಮಾನಂದ ಸಾಲಿಯಾನ್ ಮುಂಡೂರು, ಅಧ್ಯಕ್ಷರಾಗಿ ವಿಜಯ ಗೌಡ ವೇಣೂರು, ಪ್ರಧಾನ ಕಾರ್ಯದರ್ಶಿಯಾಗಿ ಚಿದಾನಂದ ಇಡ್ಯಾ, ಕೋಶಾಧಿಕಾರಿಯಾಗಿ ಪ್ರಶಾಂತ್ ಮಚ್ಚಿನ, ಉಪಾಧ್ಯಕ್ಷರಾಗಿ ಸದಾಶಿವ ಹೆಗ್ಡೆ, ಸೌಮ್ಯ ಲಾಯಿಲ, ಜತೆ ಕಾರ್ಯದರ್ಶಿಯಾಗಿ ಸುಧಾಮಣಿ ಆರ್, ಕ್ರೀಡಾ ಸಂಚಾಲಕರಾಗಿ ಹರೀಶ್ ಶಿಶಿಲ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶೇಖರ್ ಲಾಯಿಲ, ಸಂಘಟನಾ ಕಾರ್ಯದರ್ಶಿಗಳಾಗಿ ಮಹಮದ್ ಸಿದ್ದಿಕ್ ಮಲೆಬೆಟ್ಟು, ರಾಮಚಂದ್ರ ಶಿಶಿಲ, ಯೋಗೀಶ್ ಬಿಕ್ರೋಟ್ಟು, ಹರಿಣಾಕ್ಷಿ ಬಧನಾಜೆ, ಆಯ್ಕೆಯಾದರು.
ಆಯ್ಕೆ ಪ್ರಕ್ರಿಯೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟದ ಗೌರವ ಅಧ್ಯಕ್ಷ ರಾಜೀವ್ ಸಾಲಿಯಾನ್ ಮುಂಡೂರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಯುವಜನ ಒಕ್ಕೂಟದ ಮಾಜಿ ಅಧ್ಯಕ್ಷ ಲೋಕೇಶ್ ಶೆಟ್ಟಿ ಧರ್ಮಸ್ಥಳ, ವಿಠಲ್ ಸಿ ಪೂಜಾರಿ ಹೊಸಂಗಡಿ , ಸಿ ಕೆ ಚಂದ್ರಕಲಾ, ಹಾಗೂ ತಾಲೂಕಿನ ಯುವಕ ಮಂಡಲಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.