ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಂದು (ಜ.14) ಬೆಳ್ತಂಗಡಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್‌ನ ವತಿಯಿಂದ ಲಯನ್ಸ್ ಯಕ್ಷೋತ್ಸವ: ಶ್ರೀಕ್ಷೇತ್ರ ಧರ್ಮಸ್ಥಳ ಮೇಳದವರಿಂದ “ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ” ಯಕ್ಷಗಾನ ; ಜ.14 ರ 14 ಬಗೆಯ ವಿಶೇಷ ಖಾದ್ಯಗಳ ಸವಿ ಉಪಾಹಾರ

ಬೆಳ್ತಂಗಡಿ: 50 ಸಂವತ್ಸರಗಳನ್ನು ಪೂರೈಸಿ ಸುವರ್ಣ ಸಂಭ್ರಮವನ್ನು ಆಚರಿಸಿಕೊಂಡ ಹೆಮ್ಮೆಯ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ಬೆಳ್ತಂಗಡಿಯು ತನ್ನ ಸೇವಾ ಚಟುವಟಿಕೆಯ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಂಡು ಮುನ್ನಡೆಯುತ್ತಿದೆ. ಗತಕಾಲದಲ್ಲಿ ಅಳದಂಗಡಿ ಕಂಬಳೋತ್ಸವದ ಮೂಲಕ ಜನಸಾಮಾನ್ಯರ ಮನೆ ಮಾತಾಗಿದ್ದ ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಖ್ಯಾತಿಯನ್ನು ಲಯನ್ಸ್ ಯಕ್ಷೋತ್ಸವದ ಮೂಲಕ ನೂತನ ಪಥದತ್ತ ಕೊಂಡೊಯ್ಯುವ ಹೆಜ್ಜೆಯನ್ನಿಟ್ಟಿದೆ.

ಇದೀಗ ಬೆಳ್ತಂಗಡಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್‌ನ ವತಿಯಿಂದ ಜ.14 ರಂದು ಲಯನ್ಸ್ ಯಕ್ಷೋತ್ಸವ ಕಾರ್ಯಕ್ರಮವು ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದ ವಠಾರದ ಸಭಾಂಗಣದಲ್ಲಿ ನಡೆಯಲಿದೆ.

ಸಂಜೆ 7 ರಿಂದ 12 ರ ವರೆಗೆ ಯಕ್ಷಗಾನ ಪ್ರದರ್ಶನದ ಜೊತೆಗೆ ಜ.14 ರ 14 ಬಗೆಯ ವಿಶೇಷ ಖಾದ್ಯಗಳ ಸವಿ ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಶ್ರೀಕ್ಷೇತ್ರ ಧರ್ಮಸ್ಥಳ ಮೇಳದವರಿಂದ “ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ” ಯಕ್ಷಗಾನ ನಡೆಯಲಿದೆ.


ಸನ್ಮಾನ: ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಾಮಾಜಿಕ ಕಳಕಳಿಯ ಸೇವೆ ಒಂದೆಡೆಯಾದರೆ ಯಕ್ಷಗಾನ ಕ್ಷೇತ್ರದ ಹಿಮ್ಮೆಳ, ಮುಮ್ಮೇಳ ಮತ್ತು ನೇಪಥ್ಯದಲ್ಲಿ15 ವರ್ಷಗಳಿಗೂ ಮಿಗಿಲಾದ ಸಾರ್ಥಕ ಸೇವೆ ಸಲ್ಲಿಸಿದ 10 ಹೆಮ್ಮೆಯ ಕಲಾವಿದರಿಗೆ ಗೌರವಾರ್ಪಣೆಯ ಸನ್ಮಾನ ನಡೆಯಲಿದೆ ಎಂದು ಲಯನ್ಸ್ ಅಧ್ಯಕ್ಷ ಲ| ದೇವದಾಸ್ ಶೆಟ್ಟಿ ಹಿಬರೋಡಿ, ಕಾರ್ಯದರ್ಶಿ ಲ| ಕಿರಣ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಲ| ಅಮಿತಾನಂದ ಹೆಗ್ಡೆ, ಯಕ್ಷ ಸಂಯೋಜಕ ಲ| ಸುರೇಶ್ ಶೆಟ್ಟಿ ಲಾಯಿಲ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ..

Related posts

ಹೊಸಪಟ್ಣ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಯನಾಡು ಗೆಳೆಯರ ಬಳಗ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ನೆಲ್ವಿಸ್ಟರ್ ಪಿಂಟೋ ರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ

Suddi Udaya

ಚಾಮಾ೯ಡಿ : ಮರಳು ಸಾಗಾಟದ ಲಾರಿ ವಶ

Suddi Udaya

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ : ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮಕ್ಕೆ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಆಗ್ರಹ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 27ನೇ ಆಲಂಕಾರು ಶಾಖೆ ಉದ್ಘಾಟನೆ

Suddi Udaya

ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಗೆ ಪ್ರಥಮ ಬಹುಮಾನ

Suddi Udaya
error: Content is protected !!