23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಭಜನಾ ಕಾರ್ಯಕ್ರಮ

ಕೊರಿಂಜ : ಮಕರ ಸಂಕ್ರಾಂತಿಯ ಪ್ರಯುಕ್ತ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜ ಇಲ್ಲಿ ಪ್ರತಿ ತಿಂಗಳ ಸಂಕ್ರಮಣದಂದು ಶ್ರೀ ದೇವರ ಸನ್ನಿಧಿಯಲ್ಲಿ ನಡೆಯುವ ಭಜನಾ ಕಾರ್ಯಕ್ರಮವನ್ನು ಸುಬ್ರಾಯ ಹೊಳ್ಳ ಇವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮೋಕ್ತೇಸರಾಗಿರುವ ಯೋಗೀಶ್ ಪೂಜಾರಿ ಕಡ್ತಿಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ದಾಸಪ್ಪ ಗೌಡ ಕೋಡಿಯಡ್ಕ, ಪಂಚಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಸುಂದರ ಪೂಜಾರಿ, ಕಾರ್ಯದರ್ಶಿ ಕೃಷ್ಣಪ್ಪ ನಾಯ್ಕ,ಸಹ ಮೋಕ್ತೇಸರರಾಗಿರುವ ಸೇಸಪ್ಪ ರೈ ಕೊರಿಂಜ, ಶ್ರೀಮತಿ ಸುನಂದ ಆಳ್ವ ಕೊರಿಂಜ, ದೇವಸ್ಥಾನದ ಪ್ರಧಾನ ಅರ್ಚಕರಾದ ಕಾರ್ತಿಕ್ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಹಾಗೂ ಗಾನ ಸುರಭಿ ಉಜಿರೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರವನ್ನು ಸೀತಾರಾಮ ಆಳ್ವ ಕೊರಿಂಜ ಸ್ವಾಗತಿಸಿ ಧನ್ಯವಾವಿತ್ತರು.

Related posts

ಸೋಣಂದೂರು ಕಜೆ ನಿವಾಸಿ ಮುಂಡಪ್ಪ ಮೂಲ್ಯ ನಿಧನ

Suddi Udaya

ಜೆಸಿಐ ಕೊಕ್ಕಡ ಕಪಿಲ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಕೊಕ್ಕಡ ಗ್ರಾ.ಪಂ. ಸ್ವಚ್ಛತಾ ಸಂಕೀರ್ಣಕ್ಕೆ ಭೇಟಿ

Suddi Udaya

ಧರ್ಮಸ್ಥಳ: ಜೋಡುಸ್ಥಾನದಲ್ಲಿ ಮಹಿಳೆ ನೇಣುಬಿಗಿದು ಆತ್ಮಹತ್ಯೆ

Suddi Udaya

ರೆಂಕೆದ ಗುತ್ತಿನಲ್ಲಿ ಗೆಜ್ಜೆಗಿರಿಯ ಆಮಂತ್ರಣ ಪತ್ರಿಕೆ ವಿತರಣೆ

Suddi Udaya

ಇಂದಬೆಟ್ಟು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಇಬ್ರಾಹಿಂ ರವರ ಮನೆ ಕುಸಿತ

Suddi Udaya

ಎಸ್.ಐ.ಟಿ ತನಿಖೆಯ ತಡೆಯಾಜ್ಞೆ ತೆರವು ಮಾಡಿದ ಹೈಕೋರ್ಟ್

Suddi Udaya
error: Content is protected !!