30.4 C
ಪುತ್ತೂರು, ಬೆಳ್ತಂಗಡಿ
January 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಣ್ಣೀರುಪಂತ ಪ್ರಾ.ಕೃ.ಪ.ಸ. ಸಂಘ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ತಣ್ಣೀರುಪಂತ : ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ಜಗದೀಶ್ ಶೆಟ್ಟಿ ಮೈರ, ಜಯಾನಂದ ಕಲ್ಲಾಪು, ಸಾಮ್ರಾಟ್ ಕಲ್ಲೇರಿ, ಪ್ರಭಾಕರ ಗೌಡ ಪೋಸಂದೋಡಿ, ಸುನಿಲ್ ಗೌಡ ಅಣವು, ರೋಹಿತ್ ಕುಪ್ಪೆಟ್ಟಿ, ಹಿಂದುಳಿದ ವರ್ಗ ಎ ಕ್ಷೇತ್ರ ದಿಂದ ರಜನಿನಾಥ್ ಮುಂದಿಲ , ಹಿಂದುಳಿದ ಬಿ ಕ್ಷೇತ್ರ ದಿಂದ ಕೃಷ್ಣಪ್ಪ ಗೌಡ , ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಜಯಂತಿ ಪಾಲೇದು, ಸರೋಜಿನಿ ವಿಜಯ ಗೌಡ ಪರಿಶಿಷ್ಟ ಜಾತಿ ಕ್ಷೇತ್ರ ದಿಂದ ಶ್ರೀನಿವಾಸ್ ಅಳಕ್ಕೆ ಪರಿಶಿಷ್ಟ ಪಂಗಡದಿಂದ ಸುರೇಶ್ ಹೆಚ್. ಎಲ್ ಇವರುಗಳು ಬಿ.ವಿ. ಪ್ರತಿಮಾ ರಿಟರ್ನಿಂಗ್ ಅಧಿಕಾರಿಯವರಿಗೆ ಜ 14 ರಂದು ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಚುನಾವಣಾ ಪ್ರಭಾರಿಗಳಾದ ಪ್ರವೀಣ್ ರೈ ಬಾರ್ಯ, ನಂದನ್ ಕುಮಾರ್, ಕಣಿಯೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಶ್ ಜೇoಕ್ಯಾರ್ , ಮಿಥುನ್ ಕುಲಾಲ್, ಜಯರಾಮ್ ಆಚಾರ್ಯ, ಹಿರಿಯರಾದ ಪೂವಪ್ಪ ಬಂಗೇರ ಆಳಕ್ಕೆ, ದೇಜಪ್ಪ ಪೂಜಾರಿ ಆಳಕ್ಕೆ, ಶಕ್ತಿ ಕೇಂದ್ರ ಪ್ರಮುಖರು, ಜನಪ್ರತಿನಿಧಿನಗಳು, ಬೂತ್ ಸಮಿತಿ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಣೆ

Suddi Udaya

ಅ.26-27: ಬೆಳ್ತಂಗಡಿಯಲ್ಲಿ ಕೋಲ್ಕತ್ತ ಸಾರಿ ಮೇಳ

Suddi Udaya

ಮಾಸ್ತಿಕಲ್ಲು ಮಜಲು ಶ್ರೀ ಪಿಲಿಚಾಮುಂಡಿ ಹಾಗೂ ಸಹ ಪರಿವಾರ ದೈವಗಳ ನೇಮೋತ್ಸವ: ದೈವದ ಪಾತ್ರಿ ಸೇವೆಯಿಂದ ನಿವೃತ್ತಿ ಹೊಂದಿದ್ದ ಪೂವಾಜೆ ರುಕ್ಮಯ್ಯ ಗೌಡರಿಗೆ ಸನ್ಮಾನ

Suddi Udaya

ಭಾರತೀಯ ಸೇನೆಯಲ್ಲಿ 28 ವರ್ಷಗಳ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಸುಬೇದಾರ್ ಮೇಜರ್ ಶಿವಕುಮಾರ್ ರವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ

Suddi Udaya

ನಾಲ್ಕೂರು: ಬಿಜೆಪಿ ಬೂತ್ ಸಮಿತಿಯ ನೂತನ ಅಧ್ಯಕ್ಷರಾಗಿ ಸುರೇಶ್ ಪೂಜಾರಿ ಜೈಮಾತಾ ಕಾರ್ಯದರ್ಶಿಯಾಗಿ‌ ಸಂದೇಶ್ ಶೆಟ್ಟಿ ರಾಮನಗರ ಆಯ್ಕೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗುರುವಾಯನಕೆರೆ ಶಕ್ತಿ ನಗರದ ಜಂಕ್ಷನ್ ನಲ್ಲಿ ನಾಮಫಲಕ ಅಳವಡಿಕೆ

Suddi Udaya
error: Content is protected !!