April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಡ್ಡಂದಡ್ಕ ನೂರುಲ್ ಹುಧಾ ಕೇಂದ್ರ ಮಸೀದಿ ಖತೀಬ್ ಜನಾಬ್ ಅಶ್ರಫ್ ಫೈಝಿ ಅರ್ಕಾನರವರಿಗೆ ಪವಿತ್ರ ಉಮ್ರಾ ಯಾತ್ರೆಗೆ ಬೀಳ್ಕೊಡುಗೆ

ವೇಣೂರು:ಪಡ್ಡಂದಡ್ಕ ನೂರುಲ್ ಹುಧಾ ಕೇಂದ್ರ ಮಸೀದಿ ಖತೀಬ್ ಜನಾಬ್ ಅಶ್ರಫ್ ಫೈಝಿ ಅರ್ಕಾನರವರಿಗೆ ಪವಿತ್ರ ಉಮ್ರಾ ಯಾತ್ರೆಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಪತ್ರಕರ್ತ ಎಚ್ ಮೊಹಮ್ಮದ್ ವೇಣೂರು ಮಾತಾಡಿ ಖತೀಬರಿಗೆ ಶುಭ ಹಾರೈಸಿದರು.

ಪ್ರಮುಖರಾದ ಚಿಕ್ಕಮಗಳೂರಿನ ಡಾ ಸಲೀಮ್ ಗರ್ಡಾಡಿ,ಅಬ್ದುಲ್ ರಹಿಮಾನ್ ಕಟ್ಟೆ,ರಫೀಕ್ ಪಡ್ಡ ,ಮಹಮ್ಮದ್ ಪಿಜೆ, ಖಾಲಿದ್ ಪುಲಬೆ, ಅಬ್ದು ಸಲಾಂ ಕೇಶವನಗರ, ನಜೀರ್ ಪೆರಿಂಜೆ ,ಪೆರಿಂಜೆ ಮದರಸದ ಅಧ್ಯಾಪಕ ಮೊಹಮ್ಮದ್ ಅಲ್ತಾಫ್ ,ಕೆಪಿ ಬಶೀರ್ ,ಶಬ್ಬೀರ್ ಕಟ್ಟೆ , ಶಬ್ಬೀರ್ ಪಡ್ಡ,ಸದರ್ ಮೊಹಲ್ಲಿಂ ಸೇರಿದಂತೆ ಸಿಬಂದಿವರ್ಗ ಜಮಾತಿನ ಸದಸ್ಯರು ಉಪಸ್ಥಿತರಿದ್ದರು.

ಮಸೀದಿ ಸಮಿತಿ ಮತ್ತು ಜಮಾತಿನ ಸದಸ್ಯರು ಶಾಲು ಹೊದಿಸಿ ಶುಭ ಹಾರೈಸಿದ ಬಗ್ಗೆ ಮಾತಾಡಿದ ಖತೀಬ್ ಅಶ್ರಫ್ ಫೈಝಿ, ಜಮಾತಿಗೆ, ಈ ನಾಡಿಗೆ ಮತ್ತು ದೇಶದ ಉನ್ನತಿಗಾಗಿ ಪ್ರಾರ್ಥಿಸುತ್ತೇನೆಂದರು. ಇಸ್ಮಾಯಿಲ್ ಎಚ್ ಗಾಂಧಿನಗರ ಸ್ವಾಗತಿಸಿ, ವಂದಿಸಿದರು.

Related posts

ನಾರಾವಿ ವಲಯ ಬಂಟರ ಸಂಘದ ಕುತ್ಲೂರು ಗ್ರಾಮ ಸಮಿತಿ ಸಭೆ

Suddi Udaya

ನ.4 -5 : ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಪ್ರಚಲಿತ ವಿಷಯಗಳ ಕುರಿತು ರಾಜ್ಯಮಟ್ಟದ ಕಾರ್ಯಾಗಾರ ಹಾಗೂ ಸಾಮಾನ್ಯ ಸಭೆ

Suddi Udaya

ಕೊಕ್ಕಡ ಹಳ್ಳಿಂಗೇರಿ ಎರಡು ಮನೆಗಳಿಗೆ ಮರ ಬಿದ್ದು ಹಾನಿ: ಅಪಾರ ನಷ್ಟ

Suddi Udaya

ಎಲ್‌ ಸಿ ಆರ್ ವಿದ್ಯಾಸಂಸ್ಥೆ ಕಕ್ಯಪದವು: ಪದವಿ ವಿಭಾಗದ ಬಿ.ಕಾಂ ನಲ್ಲಿ ವಾಣಿಜ್ಯ ಚಟುವಟಿಕೆ

Suddi Udaya

ಮರೋಡಿ: ಅಬುಸ್ವಾಲಿಹ್ ನಿಧನ

Suddi Udaya

ಕಣಿಯೂರು ವಲಯದ ಇಳಂತಿಲ ಮತ್ತು ಅಂಡೆತ್ತಡ್ಕ ಒಕ್ಕೂಟದ ಪದಗ್ರಹಣ ಸಮಾರಂಭ

Suddi Udaya
error: Content is protected !!