23.2 C
ಪುತ್ತೂರು, ಬೆಳ್ತಂಗಡಿ
April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ : ರತ್ನಮಾನಸ ನಿಲಯದಲ್ಲಿ ಮಕರ ಸಂಕ್ರಾಂತಿ ಆಚರಣೆ

ಉಜಿರೆ: ರತ್ನಮಾನಸ ನಿಲಯದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಜ.14 ರಂದು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ರಾಜಶೇಖರ ಹಳ್ಳಿ ಮನೆ ದೀಪವನ್ನು ಬೆಳಗಿಸಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಸೂರ್ಯನು ತನ್ನನ್ನು ತಾನು ಅವಲೋಕ ಮಾಡಿಕೊಳ್ಳುವ ಕಾಲವಿದು . ಸೂರ್ಯ ಯಾರಿಗೂ ಮೋಸ ಮಾಡುವುದಿಲ್ಲ ಎಲ್ಲರಿಗೂ ಒಂದೇ ರೀತಿಯ ಶಾಖವನ್ನು ಕೊಡುತ್ತಾನೆ. ಈ ಕಾರಣಕ್ಕೆ ಜಗತ್ತಿನ ವಿಜ್ಞಾನಿಗಳು ಸೂರ್ಯನಿಗೆ ಕೈ ಮುಗಿಯುತ್ತಾರೆ. ಮನುಷ್ಯನು ಕೂಡ ಈ ಸಮಯದಲ್ಲಿ ಅವಲೋಕನ ಮಾಡಿಕೊಳ್ಳಬೇಕಾದ ಸಂಧರ್ಭ ಇದು. ಸಂಕ್ರಮಣ ಎಂದರೆ ಬದಲಾವಣೆ ಕಾಲ .ದಕ್ಷಿಣಾಯಣದಿಂದ ಉತ್ತರಾಯಣ ಕಾಲದಲ್ಲಿ ಸೂರ್ಯ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಾನೆ.ಈ ಪ್ರಕಾಶವನ್ನುನೀರು ಹೀರಿಕೊಳ್ಳುತ್ತದೆ . ಆದ್ದರಿಂದ ಈ ದಿನ ಸಮುದ್ರ , ಹೊಳೆಗಳಿಗೆ ತೆರಳಿ ಸ್ನಾನ ಮಾಡಿದರೆ ಚರ್ಮರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನದಂದು ಎಳ್ಳಿನ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡಿದರೆ ಚರ್ಮರೋಗಗಳು ವಾಸಿಯಾಗುತ್ತದೆ . ಚರ್ಮದ ಒಣಗುವಿಕೆಯನ್ನು ತಡೆಯಲು
ಎಳ್ಳು, ಕಡಲೆ ,ಬೆಲ್ಲ ,ಸಜ್ಜೆ ಸೇವನೆಯಿಂದ ನಮ್ಮ ದೇಹ ಸದೃಢವಾಗಿರುತ್ತದೆ . ಹಾಗು ಹೆಚ್ಚು ಪ್ರೋಟೀನ್ ದೊರಕುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರತ್ನಮಾನಸದ ನಿಲಯ ಪಾಲಕರಾದ ಯತೀಶ್ ಕೆ ಬಳಂಜರವರು ವಹಿಸಿ ಎಳ್ಳು ಬೆಲ್ಲ ತಿಂದು ನಾಲ್ಕು ಒಳ್ಳೆಯ ಮಾತಾಡು ಎನ್ನುವ ಗಾದೆ ಮಾತಿನೊಂದಿಗೆ ಸಂಕ್ರಾಂತಿಯ ವಿಶೇಷತೆಯನ್ನು ತಿಳಿಸಿದರು.


ವಿದ್ಯಾರ್ಥಿ ನಿಶಿತ್ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ ಯಶವಂತ ಸ್ವಾಗತಿಸಿದರು. ನಿಶಿತ್ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸುಮಂತ್ ನೆರವೇರಿಸಿದರು . ವೇದಿಕೆಯಲ್ಲಿ ರತ್ನ ಮಾನಸ ಸಿಬ್ಬಂದಿಗಳಾದ ರವಿಚಂದ್ರ, ಉದಯಾರಾಜ್ , ದೀಪಕ್ ಉಪಸ್ಥಿತರಿದ್ದರು .

Related posts

ಮಿತ್ತಬಾಗಿಲು: ಕೊಳಂಬೆ ನಿವಾಸಿ ವಿದ್ಯಾ ನೇಣು ಬಿಗಿದು ಆತ್ಮಹತ್ಯೆ

Suddi Udaya

ಉಜಿರೆ: ಅನುಗ್ರಹ ಶಾಲಾ ವಾರ್ಷಿಕ ಕ್ರೀಡಾಕೂಟ

Suddi Udaya

ನೆರಿಯ: ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ಆರೋಪಿ ಜೋನ್ಸಾನ್ ಗೆ ನ್ಯಾಯಾಂಗ ಬಂಧನ

Suddi Udaya

ಡೆಂಗ್ಯೂ ವಿರೋಧ ಮಾಸಾಚಾರಣೆ ಅಂಗವಾಗಿ ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮುಂಜಾಗೃತ ಮಾಹಿತಿ

Suddi Udaya

ಟ್ರೆಕ್ಕಿಂಗ್ ಗೆ ಬಂದು ದಾರಿ ತಪ್ಪಿದ ಬೆಂಗಳೂರಿನ ಯುವಕ ಕಾಡಿನಲ್ಲಿ ಪತ್ತೆ

Suddi Udaya

ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಅಜಿತ್ ಕುಮಾರ್, ಉಪಾಧ್ಯಕ್ಷರಾಗಿ ಜಯಂತ ಶೆಟ್ಟಿ ಆಯ್ಕೆ

Suddi Udaya
error: Content is protected !!