ಚಿತ್ಪಾವನ ಬ್ರಾಹ್ಮಣರ ಬಳಗ ಉಜಿರೆ-ಬೆಳ್ತಂಗಡಿ ಇದರ ಹದಿಮೂರನೆಯ ವಾರ್ಷಿಕೋತ್ಸವದ ಬಾಬ್ತು ಸಮಾಜಮುಖಿ ಸೇವಾಕಾರ್ಯವಾಗಿ ನೀಡುವ ನಿಧಿಯನ್ನು ಕಳೆಂಜದ ಸ್ವಾಮಿ ಶ್ರೀ ವಿವೇಕಾನಂದ ಟ್ರಸ್ಟ್ ಇವರ ನಂದಗೋಕುಲ ಗೋಶಾಲೆಗೆ ರೂ.10,000 (ರೂಪಾಯಿ ಹತ್ತು ಸಾವಿರ) ವನ್ನು ಗೋಗ್ರಾಸವಾಗಿ ಅದರ ಪ್ರವರ್ತಕ ಡಾ. ದಯಾಕರ್ ಅವರಿಗೆ ಜ.14 ರಂದು, ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಬಳಗದ ಗೌರವಾಧ್ಯಕ್ಷ ಶಂಕರ ಪಟವರ್ಧನ್, ಅಧ್ಯಕ್ಷ ಯೋಗೀಶ ಆರ್. ಭಿಡೆ, ಉಪಾಧ್ಯಕ್ಷ ಗಿರೀಶ ಡೋಂಗ್ರೆ, ಕಾರ್ಯದರ್ಶಿ ಗಣೇಶ ಶೆಂಡ್ಯೆ, ಖಜಾಂಚಿಗಳಾದ ಶ್ರೀಕಾಂತ ಗೋರೆ ಮತ್ತು ಪ್ರಶಾಂತ ಪಟವರ್ಧನ್ ಉಪಸ್ಥಿತರಿದ್ದರು.