ಬಂದಾರು : ಬಂದಾರು ಗ್ರಾಮ ಪಾಣೆಕಲ್ಲು ಶಿರಾಡಿ ಗ್ರಾಮ ದೈವ ಸಪರಿವಾರ ದೈವಸ್ಥಾನ ಕಾಲಾವಧಿ ನೇಮೋತ್ಸವದ ಸಮಾಲೋಚನಾ ಸಭೆ ಜ 14 ರಂದು ದೈವಸ್ಥಾನದ ವಠಾರದಲ್ಲಿ ನಡೆಯಿತು.
ವಿವಿಧ ಜವಾಬ್ದಾರಿ ಹಂಚಿಕೆ ಕಾರ್ಯಕ್ರಮದ ರೂಪುರೇಷೆ, ಆಯವ್ಯಯದ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಗೌರವಾಧ್ಯಕ್ಷರಾದ ಅಣ್ಣು ಗೌಡ ಬೆಳ್ತಿಗೇರು, ಅಧ್ಯಕ್ಷರಾದ ಲಿಂಗಪ್ಪ ಗೌಡ ಪೋಯ್ಯೋಲೆ, ಕಾರ್ಯದರ್ಶಿ ಗಣೇಶ್ ಗೌಡ ಪುಯಿಲ, ಅನುವಂಶೀಯ ಆಡಳಿತ ಮೊಕ್ತೇಶರರಾದ ಸೂರ್ಯನಾರಾಯಣ ಕುಡುಮತ್ತಾಯ, ಪದಾಧಿಕಾರಿಗಳು ಹಾಗೂ ಊರಿನ ಪ್ರಮುಖರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು