ಗುರುವಾಯನಕೆರೆ: ಶ್ರೀ ಕೊಡಮಣಿತ್ತಾಯ ದೈವಸ್ಥಾನ ಅರಮಲೆಬೆಟ್ಟ ಕ್ಷೇತ್ರದಲ್ಲಿ ಮಕರ ಸಂಕ್ರಮಣ ಪೂಜೆ ಮತ್ತು ಅನ್ನಸಂತರ್ಪಣೆಯು ಜ 14 ರಂದು ನಡೆಯಿತು.
ಉದ್ಯಮಿ ನವಶಕ್ತಿ ಶಶಿಧರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಫೆ.9 ರಿಂದ 12 ರವರೆಗೆ ನಡೆಯುವ ಬ್ರಹ್ಮಕುಂಭಾಭಿಷೇಕದ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಕುಂಂಭಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ, ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅರಮಲೆಬೆಟ್ಟ ಕ್ಷೇತ್ರದ ಅನುಂಶೀಕ ಆಡಳಿತದಾರ ಸುಕೇಶ್ ಕುಮಾರ್ ಕಡಂಬು, ಕುಂಭಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ಪುರಂದರ ಶೆಟ್ಟಿ ಪಾಡ್ಯಾರು, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ವಾತ್ಸಲ್ಯ, ಪ್ರಮುಖರಾದ ಸೀತರಾಮ ಶೆಟ್ಟಿ ವೈಭವ್, ಶಶಿರಾಜ್ ಶೆಟ್ಟಿ, ಸತೀಶ್ ಶೆಟ್ಟಿ ದೊಡ್ಡಮನೆ, ವಿಠಲ ಶೆಟ್ಟಿ, ಪ್ರಿಯಾ ಹೆಗ್ಡೆ,ಗಂಗಾಧರ ಆಚಾರ್ಯ, ಸುಭಾಶ್ಚಂದ್ರ ಜೈನ್, ಚಿದಾನಂದ ಇಡ್ಯ, ಗಣೇಶ್ ಕುಲಾಲ್ ಗುರುವಾಯನಕೆರೆ, ಪ್ರದೀಪ್ ಶೆಟ್ಟಿ ಸಾಯಿರಾಂ, ಮಮತಾ ಎಂ ಶೆಟ್ಟಿ, ದಾಮೋದರ್, ಸುನೀಶ್ ಕುಮಾರ್, ಆನಂದ ಶೆಟ್ಟಿ ವಾತ್ಸಲ್ಯ, ವಿಠಲ, ಅವಿನಾಶ್, ಪ್ರಶಾಂತ್ ಹಾಗೂ ಸಮಿತಿ ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದರು.
ಶಿಕ್ಷಣ ಧರಣೇಂದ್ರ ಜೈನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಪ್ರಧಾನ ಆರ್ಚಕ ಕೆ ರತ್ನಾಕರ ನೂರಿತ್ತಾಯ ವೈದಿಕ ವಿಧಿ ವಿಧಾನ ನೇರವೇರಿಸಿದರು.