April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಅನಾರು ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವ: ತೋರಣ ಮುಹೂರ್ತ, ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಕ್ಯಾಲೆಂಡರ್ ಬಿಡುಗಡೆ

ಪಟ್ರಮೆ : ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಜ.14ರಿಂದ 18 ರವರೆಗೆ ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿಗಳು ನೀಲೇಶ್ವರ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.


ಇಂದು (ಜ. 14) ತೋರಣ ಮುಹೂರ್ತ, ಊರವರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಯು ನಡೆಯಿತು.

ಈ ವೇಳೆ ದೇವಸ್ಥಾನದ 2025 ರ ನೂತನ ಕ್ಯಾಲೆಂಡರ್ ನ್ನು ಅನುವಂಶಿಕ ಆಡಳಿತ ಮೊಕ್ತೇಸರರಾದ ನಿತೇಶ್ ಬಲ್ಲಾಳ್ ಉಳಿಯಬೀಡು, ಅರ್ಚಕ ಯು.ವಿ. ಗುರುಪ್ರಸಾದ್ ನಿಡ್ವಣ್ಣಾಯ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಪಟ್ರಮೆ ಗ್ರಾ.ಪಂ. ಅಧ್ಯಕ್ಷ ಮನೋಜ್ , ಪವಿತ್ರಪಾಣಿ ಶ್ರೀಧರ ಶಬರಾಯ, ದೇವಪಾಲ ಅಜ್ರಿ ಉಳಿಯಬೀಡು, ಯುವರಾಜ ಜೈನ್ ಉಳಿಯಬೀಡು, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ರುಕ್ಮಯ್ಯ ಗೌಡ ಪದಳ, ಕಾರ್ಯದರ್ಶಿ ಆನಂದ ಗೌಡ ಕಲ್ಕುಡಂಗೆ, ಸೇವಾ ಸಮಿತಿ ಅಧ್ಯಕ್ಷ ಹರೀಶ್ ಗೌಡ ಅಪ್ರೋಡಿ, ಕಾರ್ಯದರ್ಶಿ ಶರತ್ಚಂದ್ರ ಹಿರ್ತಡ್ಕ ಹಾಗೂ ಜಾತ್ರೋತ್ಸವ ಸಮಿತಿ , ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸಂಜೆ ಧ್ವಜಾರೋಹಣ , ರಾತ್ರಿ ನಡೆಯಲಿರುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ನಿತೇಶ್ ಬಲ್ಲಾಳ್ ಉಳಿಯಬೀಡು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನಪರಿಷತ್ ಶಾಸಕರಾದ ಕೆ. ಪ್ರತಾಪ್ ಸಿಂಹ ನಾಯಕ್ ಆಗಮಿಸಲಿದ್ದಾರೆ.

ಈ ವೇಳೆ ಧರ್ಮಸ್ಥಳ ಕಲ್ಲೇರಿ ಶ್ರೀ ಸಿದ್ಧಿವಿನಾಯಕ ಸ್ಟೋರ್ ಉದ್ಯಮಿಗಳಾದ ರತ್ನಾಕರ ಪ್ರಭು, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಘಟಕ ಬಿ. ಭುಜಬಲಿ ಧರ್ಮಸ್ಥಳ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದರಾದ ಬಿ. ಸೀತಾರಾಮ ತೋಳ್ಪಾಡಿತ್ತಾಯ ಧರ್ಮಸ್ಥಳ, ಹಿರಿಯ ಯಕ್ಷಗಾನ ಕಲಾವಿದ ನರೇಂದ್ರ ಕುಮಾರ್ ಉಜಿರೆ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಪ್ರಸಿದ್ಧ ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ ಜರಗಲಿದೆ.

Related posts

ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಉಡುಪಿಯಲ್ಲಿ ಪತ್ತೆ

Suddi Udaya

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ‌ಯವರನ್ನು ಭೇಟಿ ಮಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ:ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳ ಕುರಿತು ಚರ್ಚೆ

Suddi Udaya

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಡಂತ್ಯಾರು ಶಾಖೆ ವತಿಯಿಂದ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನಕ್ಕೆ ಈ-ಹುಂಡಿ ಸಮರ್ಪಣೆ

Suddi Udaya

ಜೆಸಿಂತಾ ಡಿ ಸೋಜ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ: ಜೆಸಿಐ ಕೊಕ್ಕಡ ಕಪಿಲಾ ಘಟಕಕ್ಕೆ ಪ್ರಶಸ್ತಿಗಳ ಗರಿ

Suddi Udaya

ಬಳಂಜ: ಮರಿಯಾಲಡೊಂಜಿ ಐತಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ: ಆ. 20 ಆಟಿಕೂಟದ ಗಮ್ಮತ್ ಲೇಸ್, ವಾರ್ಷಿಕ ಮಹಾಸಭೆ

Suddi Udaya

ಹದಗೆಟ್ಟ ರಸ್ತೆ: ಮಡಂತ್ಯಾರು ಸ್ಪಂದನ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಿಂದ ರಸ್ತೆ ದುರಸ್ತಿ

Suddi Udaya
error: Content is protected !!