36.3 C
ಪುತ್ತೂರು, ಬೆಳ್ತಂಗಡಿ
January 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಂದು (ಜ.14) ಬೆಳ್ತಂಗಡಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್‌ನ ವತಿಯಿಂದ ಲಯನ್ಸ್ ಯಕ್ಷೋತ್ಸವ: ಶ್ರೀಕ್ಷೇತ್ರ ಧರ್ಮಸ್ಥಳ ಮೇಳದವರಿಂದ “ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ” ಯಕ್ಷಗಾನ ; ಜ.14 ರ 14 ಬಗೆಯ ವಿಶೇಷ ಖಾದ್ಯಗಳ ಸವಿ ಉಪಾಹಾರ

ಬೆಳ್ತಂಗಡಿ: 50 ಸಂವತ್ಸರಗಳನ್ನು ಪೂರೈಸಿ ಸುವರ್ಣ ಸಂಭ್ರಮವನ್ನು ಆಚರಿಸಿಕೊಂಡ ಹೆಮ್ಮೆಯ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ಬೆಳ್ತಂಗಡಿಯು ತನ್ನ ಸೇವಾ ಚಟುವಟಿಕೆಯ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಂಡು ಮುನ್ನಡೆಯುತ್ತಿದೆ. ಗತಕಾಲದಲ್ಲಿ ಅಳದಂಗಡಿ ಕಂಬಳೋತ್ಸವದ ಮೂಲಕ ಜನಸಾಮಾನ್ಯರ ಮನೆ ಮಾತಾಗಿದ್ದ ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಖ್ಯಾತಿಯನ್ನು ಲಯನ್ಸ್ ಯಕ್ಷೋತ್ಸವದ ಮೂಲಕ ನೂತನ ಪಥದತ್ತ ಕೊಂಡೊಯ್ಯುವ ಹೆಜ್ಜೆಯನ್ನಿಟ್ಟಿದೆ.

ಇದೀಗ ಬೆಳ್ತಂಗಡಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್‌ನ ವತಿಯಿಂದ ಜ.14 ರಂದು ಲಯನ್ಸ್ ಯಕ್ಷೋತ್ಸವ ಕಾರ್ಯಕ್ರಮವು ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದ ವಠಾರದ ಸಭಾಂಗಣದಲ್ಲಿ ನಡೆಯಲಿದೆ.

ಸಂಜೆ 7 ರಿಂದ 12 ರ ವರೆಗೆ ಯಕ್ಷಗಾನ ಪ್ರದರ್ಶನದ ಜೊತೆಗೆ ಜ.14 ರ 14 ಬಗೆಯ ವಿಶೇಷ ಖಾದ್ಯಗಳ ಸವಿ ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಶ್ರೀಕ್ಷೇತ್ರ ಧರ್ಮಸ್ಥಳ ಮೇಳದವರಿಂದ “ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ” ಯಕ್ಷಗಾನ ನಡೆಯಲಿದೆ.


ಸನ್ಮಾನ: ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಾಮಾಜಿಕ ಕಳಕಳಿಯ ಸೇವೆ ಒಂದೆಡೆಯಾದರೆ ಯಕ್ಷಗಾನ ಕ್ಷೇತ್ರದ ಹಿಮ್ಮೆಳ, ಮುಮ್ಮೇಳ ಮತ್ತು ನೇಪಥ್ಯದಲ್ಲಿ15 ವರ್ಷಗಳಿಗೂ ಮಿಗಿಲಾದ ಸಾರ್ಥಕ ಸೇವೆ ಸಲ್ಲಿಸಿದ 10 ಹೆಮ್ಮೆಯ ಕಲಾವಿದರಿಗೆ ಗೌರವಾರ್ಪಣೆಯ ಸನ್ಮಾನ ನಡೆಯಲಿದೆ ಎಂದು ಲಯನ್ಸ್ ಅಧ್ಯಕ್ಷ ಲ| ದೇವದಾಸ್ ಶೆಟ್ಟಿ ಹಿಬರೋಡಿ, ಕಾರ್ಯದರ್ಶಿ ಲ| ಕಿರಣ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಲ| ಅಮಿತಾನಂದ ಹೆಗ್ಡೆ, ಯಕ್ಷ ಸಂಯೋಜಕ ಲ| ಸುರೇಶ್ ಶೆಟ್ಟಿ ಲಾಯಿಲ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ..

Related posts

ಉಜಿರೆ ಹಾ.ಉ.ಸ. ಸಂಘದ ವತಿಯಿಂದ ಬದನಾಜೆ ಶಾಲೆಯ ನೂತನ ಸಭಾಂಗಣಕ್ಕೆ ದೇಣಿಗೆ ಹಸ್ತಾಂತರ

Suddi Udaya

ಮಾಲಾಡಿ ಗ್ರಾಮ ಸಭೆ: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಬಡಗಕಾರಂದೂರು ಸ.ಉ.ಪ್ರಾ.ಶಾಲಾ ಪ್ರತಿಭಾ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿ ಶೇ. 32.39 ಮತದಾನ

Suddi Udaya

ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರವರು ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ, ಸೌತಡ್ಕ ಮಹಾಗಣಪತಿ ದೇವಸ್ಥಾನ ಹಾಗೂ ಕಾವು ತ್ರಿಗುಣಾತ್ಮಿಕ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ

Suddi Udaya

ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿಗೆ ಶೇ.98.17 ಫಲಿತಾಂಶ

Suddi Udaya
error: Content is protected !!