ಬೆಳ್ತಂಗಡಿ: ಬಳಂಜ ಉನ್ನತೀಕರಿಸಿದ ಪ್ರಾಥಮಿಕ,ಪ್ರೌಢಶಾಲೆ ಅಮೃಮಹೋತ್ಸವ ಸಂಭ್ರಮದಲ್ಲಿದ್ದು ಈ ಪ್ರಯುಕ್ತ ಬಳಂಜ ಶಿಕ್ಷಣ ಟ್ರಸ್ಟ್ ರಿ, ಅಮೃತ ಮಹೋತ್ಸವ ,ಹಳೆವಿದ್ಯಾರ್ಥಿ ಸಂಘ, ಶಾಲಾಬಿವೃದ್ದಿ ಸಮಿತಿ, ಯುವಕ ಮಂಡಲ, ಮಹಿಳಾ ಮಂಡಲ ಮತ್ತು ವಿವಿಧ ಸಂಘಸಂಸ್ಥೆಗಳು ಹಲವಾರು ಅಬಿವೃದ್ದಿ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಇದಕ್ಕೆ ಪ್ರೋತ್ಸಾಹವಾಗಿ ಶ್ರಿಮಾತಾ ನಾಲ್ಕೂರು ತಂಡವು ರೂ ಹತ್ತು ಸಾವಿರದ ನೆರವನ್ನು ಬುಧವಾರ ಬಳಂಜ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಮನೋಹರ್ ಬಳಂಜರವರಿಗೆ ಹಸ್ತಾಂತರಿಸಿದರು.
ಇತ್ತಿಚೆಗೆ ಖ್ಯಾತ ಕಂಬಳ ಓಟಗಾರ ದಿ.ರಮಾನಂದ ಪೂಜಾರಿ ಯೈಕುರಿ ಇವರ ಸ್ಮರಣಾರ್ಥ ಶ್ರಿಮಾತ ನಾಲ್ಕೂರು ತಂಡವು ನಡೆಸಿದ ಹೊನಲು ಬೆಳಕಿನ ಬಿಡ್ಡಿಂಗ್ ಮಾದರಿಯ ವಾಲಿಬಾಲ್ ಪಂದ್ಯಾಟ ನಡೆಸಿ ಉಳಿಕೆ ಹಣವನ್ನು ಶಿಕ್ಷಣ ನೆರವಿಗೆ ನೀಡಿದರು.
ಈ ಸಂದರ್ಭದಲ್ಲಿ ಶ್ರಿಮಾತ ನಾಲ್ಕೂರು ತಂಡದ ಸನತ್ ಶೆಟ್ಟಿ, ಹರೀಶ್ ಮಜ್ಜೇನಿ,ಪುರಂದರ ಪುಜಾರಿ ಪೇರಾಜೆ, ನಿಶಾಂತ್ ಹುಂಬೆಜೆ, ಆದರ್ಶ್ ಯೈಕುರಿ,ರಚನ್ ಮಜಲೋಡಿ, ಸತೀಶ್ ದೇವಾಡಿಗ,ಬಳಂಜ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ರತ್ನರಾಜ್ ಪೇರಂದಬೈಲ್,ಬಳಂಜ ಗ್ರಾ.ಪಂ ಸದಸ್ಯ ರವೀಂದ್ರ ಬಿ ಅಮಿನ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನಾ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಂಗಸ್ವಾಮಿ ಹಾಗೂ ಶಿಕ್ಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.