April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ರಾಡಿ : ಗೋಳಿಯಂಗಡಿಯಲ್ಲಿ ಸ್ಕಿಡ್‌ ಆಗಿ ಬಿದ್ದ ಬೈಕ್ : ಸವಾರರಿಗೆ ಗಾಯ

ಕೊಕ್ರಾಡಿ : ಗೋಳಿಯಂಗಡಿ ಎಂಬಲ್ಲಿ ನಾರಾವಿ- ವೇಣೂರು ರಸ್ತೆಯಲ್ಲಿ ದ್ವಿಚಕ್ರ ವಾಹನವು ಚಾಲನಾ ಹತೋಟಿ ತಪ್ಪಿ ಸ್ಕಿಡ್‌ ಆಗಿ ಬಿದ್ದು ಸವಾರರಿಗೆ ಗಾಯಗಳಾದ ಘಟನೆ ಜ.13ರಂದು ನಡೆದಿದ್ದು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.

ಜ.13 ರಂದು ರಾತ್ರಿ ಕೊಕ್ರಾಡಿ ಗ್ರಾಮದ ಗೋಳಿಯಂಗಡಿ ಎಂಬಲ್ಲಿ ನಾರಾವಿ- ವೇಣೂರು ರಸ್ತೆಯಲ್ಲಿ ದ್ವಿಚಕ್ರ ವಾಹನ ಅದರ ಸವಾರ ಚಾಲನಾ ಹತೋಟಿ ತಪ್ಪಿ ಸ್ಕಿಡ್‌ ಆಗಿ ಬಿದ್ದು ಸಹ ಸವಾರ ಲೋಹಿತ್‌ ರವರ ಕಾಲಿಗೆ ಹಾಗೂ ಸವಾರ ತಿಲಕೇಶ ರವರ ಕೈ ಕಾಲಿಗೆ ತರಚಿದ ಹಾಗೂ ಗುದ್ದಿದ ಗಾಯಗಳಾಗಿದ್ದು ಅಪಘಾತದಿಂದ ಉಂಟಾದ ನೋವು ಉಲ್ಬಣಿಸಿರುವುದರಿಂದ ಗಾಯಾಳುಗಳು ಉಜಿರೆ ಬೆನಕ ಆಸ್ಪತ್ರೆಗೆ ಹೋದ ಸಮಯ ಸಹ ಸವಾರ ಲೋಹಿತ್‌ ರವರ ಕಾಲಿನ ಎಕ್ಸರೇ ತೆಗೆದು ನೋಡಲಾಗಿ ಮೂಳೆ ಮುರಿತದ ಗಾಯಗಳಾಗಿ ಚಿಕಿತ್ಸೆಗೆ ದಾಖಲಾಗಿದ್ದು, ಸವಾರ ತಿಲಕೇಶ ಹೋರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಈ ಬಗ್ಗೆ ಪ್ರಥಮವಾಗಿ ಸವಾರರಿಬ್ಬರು ಅಣ್ಣ-ತಮ್ಮಂದಿರಾಗಿದ್ದರಿಂದ ದೂರು ನೀಡದೇ ಇದ್ದು ಈಗ ಸಹ ಸವಾರ ಲೋಹಿತ್‌ ರವರಿಗೆ ಉಂಟಾದ ಗಾಯ ತೀವ್ರಸ್ವರೂಪದ್ದಾಗಿದ್ದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತಾರೆ.

Related posts

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ ಪಕ್ಷದ ಸಂಸ್ಥಾಪನಾ ದಿನಾಚರಣೆ

Suddi Udaya

ಕಕ್ಕಿಂಜೆ ಮನ್ನಡ್ಕಪಾದೆ ಗುಡ್ಡಕ್ಕೆ ಬೆಂಕಿ

Suddi Udaya

ನೆಲ್ಯಾಡಿ-ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ವತಿಯಿಂದ ಸೌತಡ್ಕ ಸೇವಾಧಾಮ ಪುನಶ್ವೇತನ ಕೇಂದ್ರಕ್ಕೆ ಹಣ್ಣು ಹಂಪಲು ವಿತರಣೆ

Suddi Udaya

ಮಾ.24: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ 16ನೇ ವರ್ಷದ ಸಾಮೂಹಿಕ ವಿವಾಹ

Suddi Udaya

ಕುಕ್ಕಾವು ಸ.ಹಿ.ಪ್ರಾ. ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿ ಲೀಲಾ ರವರಿಗೆ ಅಭಿನಂದನಾ ಸಮಾರಂಭ

Suddi Udaya

ಕೊಕ್ಕಡ ಪರಿಸರದಲ್ಲಿಒಂಟಿ ಸಲಗ ದಾಳಿ: ಅಪಾರ ಕೃಷಿ ಹಾನಿ

Suddi Udaya
error: Content is protected !!