ಕೊಕ್ಕಡ: ಸೌತಡ್ಕ ಪಾರ್ಕಿಂಗ್ ಸ್ಥಳದಲ್ಲೆ ಪರಿಸರ ದಿನಾಚರಣೆಯ ಅಂಗವಾಗಿ ನೆಟ್ಟ ಗಿಡಗಳನ್ನು ಬೇಲಿ ಹಾಕಿ ಸಂರಕ್ಷಣೆ ಮಾಡಲಾಗಿತ್ತು, ಆದರೆ ಜ.11 ರಂದು ಆ ಬೇಲಿಗಳನ್ನು ತೆಗೆದಿದ್ದು, ಸಂರಕ್ಷಿಸಲಾಗಿದ್ದ ಗಿಡಗಳನ್ನು ಆಡು ದನಗಳು ತಿಂದು ನಾಶ ಮಾಡಿತ್ತು.
ಈ ಬಗ್ಗೆ ಸುದ್ದಿ ಉದಯ ವೆಬ್ ಸೈಟ್ ನಲ್ಲಿ ಜ.13 ರಂದು ವರದಿ ಪ್ರಕಟಿಸಿದ ಬೆನ್ನಲ್ಲೇ, ಅಂದೇ ಸಂಜೆ ತೆಗೆದಿದ್ದ ಬೇಲಿಗಳನ್ನು ಯಥಾ ಪ್ರಕಾರ ಗಿಡಗಳಿಗೆ ಸಂರಕ್ಷಿಸಲು ಅಳವಡಿಸಲಾಗಿದೆ.