ಅಳದಂಗಡಿ ವಲಯದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಡಗಕಾರಂದೂರು ‘ಎ’ ಒಕ್ಕೂಟದ ಕೊಳಕ್ಕೆ , ಪೂರ್ಣೇಶ್ವರಿ, ಮಹಿಷಾ ಮರ್ದಿನಿ, ವಿನಾಯಕ, ನಾಲ್ಕು ಸಂಘಗಳು ಸೇರಿ ಕಳೆದ 22 ವರ್ಷದಿಂದ ಮಕರ ಸಂಕ್ರಾಂತಿಯ ದಿವಸ ವಾರ್ಷಿಕ ಭಜನ ಕಾರ್ಯಕ್ರಮವನ್ನು ನಡೆಸುತ್ತಾ ಬರುತ್ತಿದ್ದು, ಅದರಂತೆ ಜ.14ರಂದು ಭಜನಾ ಕಾರ್ಯಕ್ರಮವು ಶಾಂತಪ್ಪ ಪೂಜಾರಿ ಅವರ ಮನೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಂತಪ್ಪ ಪೂಜಾರಿ ವಹಿಸಿದರು. ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಸದಾನಂದ ಪೂಜಾರಿ ಉಂಗಿಲಬೈಲು, ನಾರಾಯಣ ಪದ್ಮುಂಜ, ಮೇಲ್ವಿಚಾರಕಿ ಶ್ರೀಮತಿ ಸುಮಂಗಲ, ಒಕ್ಕೂಟದ ಅಧ್ಯಕ್ಷ ಹರೀಶ್ ಸಾಲಿಯನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಶಾಲಿನಿ, ಸೋಮನಾಥೇಶ್ವರಿ ಭಜನಾ ಮಂಡಳಿಯ ಕಾರ್ಯದರ್ಶಿ ಮಂಜುನಾಥ ಆಚಾರ್ಯ, ಯೋಗೇಶ್ ಪೂಜಾರಿ ಕುರ್ದೊಟ್ಟು, ವಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು. ಕೊಳಕ್ಕೆ ಪ್ರಗತಿ ಬಂದು ಸಂಘದ ಹಿರಿಯ ಸದಸ್ಯರಾದ ಶಾಂತಿ ರಾಜ್ ಗುಡಿಗರ್ ಸ್ವಾಗತಿಸಿ, ಸದಾನಂದ ಪೂಜಾರಿ ಕೊಳಕ್ಕೆ ಧನ್ಯವಾದವಿತ್ತರು.