ಅಳದಂಗಡಿ: ಸುಲ್ಕೇರಿಮೊಗ್ರು ಹಿರಿಯ ಪ್ರಾಥಮಿಕ ಶಾಲೆಯ ನೀರಿನ ಐದು ನಳ್ಳಿಗಳನ್ನು ಮತ್ತು ಪಂಚಾಯತ್ ನ ನಳ್ಳಿಗಳನ್ನು ಯಾರೋ ಕಿಡಿಗೇಡಿಗಳು ಮುರಿದು ಅಲ್ಲಲ್ಲಿ ನೀರಿನ ಪೈಪ್ ಗಳನ್ನು ಐದಾರು ಕಡೆ ತುಂಡುಗಳನ್ನಾಗಿ ಮಾಡಿದ್ದಲ್ಲದೆ, ಬೋರ್ ವೆಲ್ ಪಂಪಿನ ಪೈಪನ್ನು ತುಂಡು ಮಾಡಿ ಪಂಪ್ ಹಗ್ಗದಲ್ಲಿ ನೇತಾಡುತ್ತಿರುವುದು ಕಂಡು ಬಂದಿರುತ್ತದೆ.
ಈ ಬಗ್ಗೆ ಸೂಕ್ತ ತನಿಖೆ ಮಾಡುವಂತೆ ಕ್ಷೇತ್ರ ಶಾಲಾ ಶಾಲಾಭಿವೃದ್ದಿ ಸಮಿತಿ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.