January 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ದಶಮ ಸಂಭ್ರಮದ ಸಭಾ ಕಾರ್ಯಕ್ರಮ

ಕಕ್ಯಪದವು: ಎಲ್ ಸಿ ಆರ್ ವಿದ್ಯಾ ಸಂಸ್ಥೆಯಲ್ಲಿ ಹತ್ತನೇ ವರ್ಷದ ಪ್ರಯುಕ್ತ ದಶಮ ಸಂಭ್ರಮದ ಸಭಾ ಕಾರ್ಯಕ್ರಮವು ಜ. 11 ರಂದು ಶಾಲಾ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ದಿವಂಗತ ರೋಹಿನಾಥ್ ಪಾದೆಯವರನ್ನು ಪುಷ್ಪ ನಮನ ಸಲ್ಲಿಸುವ ಮೂಲಕ ಸ್ಮರಿಸಲಾಯಿತು.

ವಿಠಲ ಎ. ಪ್ರಾಂಶುಪಾಲರು ಪದವಿ ಪೂರ್ವ ಕಾಲೇಜು , ಮಂಗಳೂರು ಇವರು ದೀಪ ಬೆಳಗಿಸುವುದರ, ಮೂಲಕ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ನಮ್ಮ ಸಂಸ್ಥೆಯ ಕುರಿತು ಹೆಮ್ಮೆಯ ಮಾತುಗಳನ್ನಾಡಿದರು.
ತುಳು ಚಲನಚಿತ್ರ ಕಲಾವಿದರಾದ ಅರವಿಂದ ಬೋಳಾರ್ ಕಾರ್ಯಕ್ರಮವನ್ನು ಉದ್ದೇಶಿಸಿ ಶಿಕ್ಷಣವು ಜೀವನದ ಅವಿಭಾಜ್ಯ ಅಂಗ ಎನ್ನುತ್ತಾ ,ತಮ್ಮ ಹಾಸ್ಯ ಭರಿತ ಮಾತುಗಳಿಂದ ಶುಭಾಶಯಗಳನ್ನು ಕೋರಿದರು ಹಾಗೂ ಸಂಸ್ಥೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಹೊಸ ವರುಷ ಎಲ್ಲರ ಬಾಳಲ್ಲಿ ಹೊಸ ಹರುಷ ತರಲಿ ಎನ್ನುವ ಉದ್ದೇಶದಿಂದ ಎಲ್ ಸಿ ಆರ್ ಕ್ಯಾಲೆಂಡರ್ ನನ್ನು ಗಣ್ಯರ ನೇತೃತ್ವದಲ್ಲಿ ಅನಾವರಣಗೊಳಿಸಲಾಯಿತು. ಕಳೆದ ಹತ್ತು ವರ್ಷಗಳಿಂದ ಸೇವೆಯನ್ನು ಸಲ್ಲಿಸಿದ್ದ ಬೋಧಕ ಹಾಗೂ ಬೋಧಕೇತರ ವರ್ಗದವರನ್ನು ಸನ್ಮಾನಿಸಲಾಯಿತು.
2023 – 24 ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ,ಪಿಯುಸಿ ಮತ್ತು ಡಿಗ್ರಿ ತರಗತಿಗಳಲ್ಲಿ ಪ್ರಥಮ ,ದ್ವಿತೀಯ, ತೃತೀಯ ಹಾಗೂ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ವಿಶೇಷ ಆಹ್ವಾನಿತರಾದ ಅಬ್ದುರಹ್ಮಾನ್ ಮುಈನಿ ಕಕ್ಯಪದವು ಇವರು ಮಾತಾಡಿ ಸಂಸ್ಥೆಯ ಹತ್ತು ವರ್ಷದ ಕಾರ್ಯ ಸಾಧನೆ ಕುರಿತು ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.ನಮ್ಮ ಶಾಲಾ ಶೈಕ್ಷಣಿಕ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀಮತಿ ಲಿಲ್ಲಿ ಜಿ ಕಾನ್ ಸ್ಸೆಸೊ ಇವರನ್ನು ಸನ್ಮಾನಿಸುತ್ತಾ,ಸಂಸ್ಥೆಯ ಕಾರ್ಯ ಸಾಧನೆಯ ಬಗ್ಗೆ ಹೊಗಳುತ್ತಾ ,ಶುಭ ಹಾರೈಸಿದರು.

ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗದವರಿಗೆ ದಶಮ ಸಂಭ್ರಮದ ಪ್ರಯುಕ್ತ ಪ್ರಶಸ್ತಿ ಪ್ರಧಾನವನ್ನು ಮಾಡಲಾಯಿತು.
ಸಂಸ್ಥೆಯ ಸಂಚಾಲಕರಾದ ಶ್ರೀಮತಿ ಬಬಿತಾ ರೋಹಿನಾಥ್ ಅಧ್ಯಕ್ಷತೆ ವಹಿಸಿದರು. ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಶಿವಾನಿ ರೋಹಿನಾಥ್ ಗೌರವ ಉಪಸ್ಥಿತಿಯಲ್ಲಿದ್ದರು. ಟ್ರಸ್ಟಿಗಳಾದ ಕುಮಾರಿ ಡಾ.ಜಯಾನಿ ರೋಹಿನಾಥ್ ಸಫಲತೆಯನ್ನು ಸಾಧಿಸಲು ಕಠಿಣ ಶ್ರಮ ಅಗತ್ಯ ಎಂದು ಹೇಳಿದರು . ಟ್ರಸ್ಟಿಯಾದ ಯಜ್ಞೇಶ್ ಸಂಸ್ಥೆಯ ಹತ್ತು ವರ್ಷದ ಸಾಧನೆಯ ಕುರಿತು ಹಿತವಚನವನ್ನು ನುಡಿದರು ಹಾಗೂ ಇವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯ ಕೆ ಸ್ವಾಗತಿಸಿ ,ಪ್ರಾಂಶುಪಾಲರಾದ ಜೋಸ್ಟನ್ ಲೋಬೋ ವಾರ್ಷಿಕ ವರದಿ ವಾಚಿಸಿ, ಉಪನ್ಯಾಸಕಿ ಸೌಮ್ಯ ಎನ್ ವಂದಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ದೀಕ್ಷಿತ ಮತ್ತು ಸಹ ಶಿಕ್ಷಕಿ ವಿನ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಸಂಯೋಜಕರಾದ ಯಶವಂತ್ ಜಿ ನಾಯಕ್ ಅವರ ನೇತೃತ್ವದಲ್ಲಿ ಕಾರ್ಯಕ್ರಮವು ಸುಸಂಪನ್ನಗೊಂಡಿತು.

Related posts

ಹೇಮಾವತಿ ವೀ. ಹೆಗ್ಗಡೆಯವರ ಕನಸನ್ನು ಸಾಕಾರಗೊಳಿಸಿದ ರಂಗಶಿವ ತಂಡ ‘ಮುದ್ದಣನ ಮನೋರಮೆ’ ನಾಟಕ

Suddi Udaya

ಬೆಳ್ತಂಗಡಿ ಅಬಕಾರಿ ನಿರೀಕ್ಷಕರಾಗಿ ಲಕ್ಷ್ಮಣ ಉಪ್ಪಾರ ಕರ್ತವ್ಯಕ್ಕೆ ಹಾಜರು

Suddi Udaya

ದ.ಕ ಜಿಲ್ಲಾ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಿಧನ

Suddi Udaya

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ ಪುದುವೆಟ್ಟು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಸಿಎಂ ಸಿದ್ದರಾಮಯ್ಯರವರಿಗೆ ಮನವಿ

Suddi Udaya

ಜಿಲ್ಲಾ ಮಟ್ಟದ ಐ.ಟಿ.ಐ. ವಿದ್ಯಾರ್ಥಿನಿಯರ ತ್ರೋಬಾಲ್ ಪಂದ್ಯಾಟ: ಉಜಿರೆ ಎಸ್.ಡಿ.ಎಂ ಮಹಿಳಾ ಐಟಿಐ ಪ್ರಥಮ

Suddi Udaya

ಕಾಂಗ್ರೆಸ್ ಭ್ರಷ್ಟಾಚಾರದ ಆಡಳಿತವನ್ನೇ ನೀಡುವುದು ಎಂಬುದು ಗಟ್ಟಿಯಾಗುತ್ತಿದೆ ಇದಕ್ಕೆ ಇತ್ತೀಚಿನ ಕೃಷಿ ಸಚಿವರ ನಡೆಯೇ ಸಾಕ್ಷಿಯಾಗಿದೆ: ಪ್ರತಾಪಸಿಂಹ ನಾಯಕ್

Suddi Udaya
error: Content is protected !!