ಧರ್ಮಸ್ಥಳ :ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಧರ್ಮಸ್ಥಳ ಇದರ ಆಶ್ರಯದಲ್ಲಿ ಇಕೋಫ್ರೆಶ್ ಎಂಟರ್ಪ್ರೈಸಸ್ ಬೆಳ್ತಂಗಡಿ/ಪುತ್ತೂರು ಇದರ ಸಹಯೋಗದೊಂದಿಗೆ ಜ.13 ರಿಂದ ಜ.18 ರವರೆಗೆ ನಡೆಯುವ ರೈತರಿಗಾಗಿ ಕೃಷಿ ಉಪಕರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳದ ಉದ್ಘಾಟನೆಯನ್ನು ಸಂಘದ ಅಧ್ಯಕ್ಷ ಪ್ರೀತಮ್ ಡಿ ದೀಪ ಬೆಳಗಿಸುವ ಮೂಲಕ ನೆರವೇರಿಸಿ ಶುಭ ಕೋರಿದರು.
ಬೆಳ್ತಂಗಡಿ ಇಕೋಫ್ರೆಶ್ ಎಂಟರ್ಪ್ರೈಸಸ್ ಮಾಲಕ ರಾಕೇಶ್ ಹೆಗ್ಡೆ ಬಳಂಜರವರು ಕೃಷಿ ಉಪಕರಣಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ , ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಸುಂದರ ಡಿ, ಸಂಘದ ಮಾಜಿ ಅಧ್ಯಕ್ಷ ಭುಜಬಲಿ, ನಿರ್ದೇಶಕರುಗಳಾದ ಶ್ರೀಮತಿ ಶಾಂಭವಿ ರೈ, ಉಮಾನಾಥ, ಶೀನ, ಶ್ರೀಮತಿ ಧನಲಕ್ಷ್ಮೀ ಜನಾರ್ದನ್ , ಪ್ರಭಾಕರ ಗೌಡ ಬೊಳ್ಮ, ನೀಲಾಧರ ಶೆಟ್ಟಿ, ಪ್ರಸನ್ನ ಹೆಬ್ಬಾರ್ , ಚಂದ್ರಶೇಖರ,ವಿಕ್ರಂ ಗೌಡ , ತಂಗಚ್ಚನ್ ,ವಲಯ ಮೇಲ್ವಿಚಾರಕ ಸುದರ್ಶನ್ ಕೋಟ್ಯಾನ್ , ಸಂಘದ ಸದಸ್ಯರಾದ ಪ್ರಭಾಕರ್, ಲೋಕೇಶ್ ಶೆಟ್ಟಿ, ರಂಗನಾಥ್, ಯಶವಂತ್, ಉಪಸ್ಥಿತರಿದ್ದರು.
ಲೋಕೇಶ್ ಶೆಟ್ಟಿ ಸ್ವಾಗತಿಸಿದರು.