ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಘಗಳಲ್ಲೊಂದಾದ ‘ಕಲಾ ಸಿಂಧು’ ಸಾಂಸ್ಕೃತಿಕ ಸಂಘದ ವತಿಯಿಂದ ಭಾರತೀಯ ಹಬ್ಬಗಳಲ್ಲಿ ಒಂದಾದ ಮಕರಸಂಕ್ರಾಂತಿ ಹಬ್ಬದ ಪ್ರಾಮುಖ್ಯತೆಯನ್ನು ತಿಳಿಸುವ ಅಂಗವಾಗಿ ಹಬ್ಬದ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ದಿನದ ವೈಜ್ಞಾನಿಕ ವಿಶೇಷತೆ, ಹಬ್ಬದ ಆಚರಣೆಯ ವಿಧಾನಗಳು, ಸಮೂಹ ಗಾಯನ ಹಾಗೂ ವಿದ್ಯಾರ್ಥಿಗಳು ಎಳ್ಳು ಬೆಲ್ಲ ಹಂಚಿ ತಾವೇ ಗಾಳಿಪಟಗಳನ್ನು ತಯಾರಿಸಿ ಹಾರಿಸಿ ಹಬ್ಬದ ಆಚರಣೆ ಮಾಡಿದರು.
ವಿದ್ಯಾರ್ಥಿ ಶಶಾಂಕ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.