23.2 C
ಪುತ್ತೂರು, ಬೆಳ್ತಂಗಡಿ
April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಜ.18: ಉಜಿರೆ ಬೆನಕ ಆಸ್ಪತ್ರೆಯ ರಜತ ಸಂಭ್ರಮ ಹಾಗೂ ನೂತನ ವಿಸ್ತೃತ ಕಟ್ಟಡ ಉದ್ಘಾಟನೆ

ಉಜಿರೆ: ಕೇವಲ ಏಳು ಹಾಸಿಗೆಗಳ ಎರಡು ವೈದ್ಯರು ಹಾಗೂ ಎರಡು ದಾದಿಯರಿಂದ ಎರಡು ದಶಕಗಳ ಹಿಂದೆ ಪ್ರಾರಂಭವಾದ ಬೆನಕ ಆಸ್ಪತ್ರೆ ಸ್ಥಳಿಯ ಅಗತ್ಯತೆಗಳಿಗೆ ಅನುಗುಣವಾಗಿ ತನ್ನ ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸುತ್ತಾ ಇದೀಗ 130 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆರೋಗ್ಯ ಸೇವೆಗಳನ್ನೊಳಗೊಂಡ ಖ್ಯಾತ ಆಸ್ಪತ್ರೆಯಾಗಿ ಬೆಳೆದು ನಿಂತಿದೆ ಎಂದು ಉಜಿರೆ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣರವರು ಹೇಳಿದರು.

ಅವರು ಜ. 16 ರಂದು ಬೆನಕ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ರಜತ ಸಂಭ್ರಮದಲ್ಲಿರುವ ನಮ್ಮ ಆಸ್ಪತ್ರೆಯು ಗುಣಮಟ್ಟದ ಸೇವೆ ನೀಡುತ್ತಿದೆ. ನಮ್ಮ ಪ್ರತಿಯೊಂದು ಹೆಜ್ಜೆಯ ಆಶಯ ಈ ಪ್ರದೇಶದಲ್ಲೆ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ರೋಗಿಗಳಿಗೆ ಒದಗಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಹೊಸ ಸೇವೆಯನ್ನು ಆರಂಭಿಸುತ್ತಾ ಬಂದಿದ್ದೇವೆ ಎಂದರು.

ರಜತ ಸಂಭ್ರಮದ ಉದ್ಘಾಟನೆಯನ್ನು ಜ. 18 ರಂದು ನಡೆಯಲಿದ್ದು ಕಾರ್ಯಕ್ರಮವನ್ನು ವಿಧಾನ ಸಭೆ ಸಭಾಪತಿ ಯು. ಟಿ. ಖಾದರ್ ನೆರವೇರಿಸಲಿದ್ದಾರೆ. ವಿಸ್ಕೃತ ಕಟ್ಟಡದ ಉದ್ಘಾಟನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ದಿನೇಶ್ ಗುಂಡೂರಾವ್, ತುರ್ತು ಚಿಕಿತ್ಸಾ ವಿಭಾಗದ ಉದ್ಘಾಟನೆಯನ್ನು ಮಂಗಳೂರು ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಡೇ-ಕೇರ್ ವಿಭಾಗದ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ , ಮಕ್ಕಳ ವಾರ್ಡ್ ಉದ್ಘಾಟನೆಯನ್ನು ಅರೆ ವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ. ಯು.ಟಿ. ಇಫಿಕರ್ ಅಲಿ ನೆರವೇರಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಷಾಕಿರಣ್ ಕಾರಂತ , ಉಪಾಧ್ಯಕ್ಷ ರವಿಕುಮಾ‌ರ್ ಬರೆಮೇಲು ಭಾಗವಹಿಸಲಿದ್ದಾರೆ.ಸೀತಾರಾಮ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಸೇವೆಗಳು: ಬೆನಕ ಹೆಲ್ತ್ ಕೇರ್ ಸೇವೆ,ಬೆನಕ ಸಭಾಭವನ, ಅತ್ಯಾಧುನಿಕ ಗ್ಯಾಸ್ಟ್ರೋಎಂಡೋಸ್ಕೋಪಿಕ್ ಉಪಕರಣ,ಆಧುನಿಕ ಆಲ್ಟ್ರಾ ಸೌಂಡ್ ಮತ್ತು ಡಿಜಿಟಲ್ ಎಕ್ಸ್ಚರೇ,ಸಿ.ಟಿ ಸ್ಕ್ಯಾನ್,ತುರ್ತು ಚಿಕಿತ್ಸಾ ವಿಭಾಗ,ಅತ್ಯಾಧುನಿಕ ಅಪರೇಷನ್ ಥಿಯೇಟರ್‌, ತೀವ್ರ ನಿಗಾ ಘಟಕ, ಮೈಕ್ರೋ ಸರ್ಜರಿ ಸೇವೆ,ಕೀಹೋಲ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಸಮಕಾಲೀನ ಚಿಕಿತ್ಸೆಯ ಬದ್ದತೆ,ಸ್ಪೆಷಾಲಿಟಿ ಸೇವೆಗಳು,ವಿಮಾ ಸೌಲಭ್ಯ,ಆರೋಗ್ಯ ಶಿಬಿರಗಳು,ಸುಸಜ್ಜಿತ ತುರ್ತು ಚಿಕಿತ್ಸಾ ಘಟಕ, ಮಕ್ಕಳ ಸ್ನೇಹಿ ವಾರ್ಡ್,ವಿಶಾಲವಾದ ಕ್ಯಾಂಟೀನ್, ಮನೋಲ್ಲಾಸ ನೀಡುವ ವಿನ್ಯಾಸ.

ಪತ್ರಿಕಾಗೋಷ್ಠಿಯಲ್ಲಿ ಡಾ. ಜಿ.ಕೆ, ಡಾ.ಆದಿತ್ಯ ರಾವ್, ಡಾ.ಅಂಕಿತಾ ಜಿ ಭಟ್, ಡಾ.ರೋಹಿತ್ ಜಿ ಭಟ್ ಉಪಸ್ಥಿತರಿದ್ದರು. ಬೆನಕ ಪಬ್ಲಿಕ್ ರಿಲೇಶನ್ ಆಫೀಸರ್ ಎಸ್ .ಜಿ ಭಟ್ ಸ್ವಾಗತಿಸಿ, ವಂದಿಸಿದರು.

Related posts

ಬಿಜೆಪಿ ಧರ್ಮಸ್ಥಳದ ಶಕ್ತಿಕೇಂದ್ರದ ಪ್ರಮುಖ್ ಹರ್ಷಿತ್ ಜೈನ್ ಹಾಗೂ ವಿಕ್ರಮ್ ಆಯ್ಕೆ

Suddi Udaya

ಕಣಿಯೂರು ಶೌರ್ಯ ವಿಪತ್ತು ನಿರ್ವಹಣೆ ಘಟಕದ ಮಾಸಿಕ ಸಭೆ

Suddi Udaya

ನ.10: ಬಳಂಜ -ನಾಲ್ಕೂರು – ತೆಂಕಕಾರಂದೂರು ಗ್ರಾಮದ ಪ್ರಮುಖ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾರ್ವಜನಿಕ ಪ್ರಥಮ ವರ್ಷದ ಕೆಸರ್ದ ಲೇಸ್ ಬಲೇ ಗೊಬ್ಬುಗ

Suddi Udaya

ಮಿತ್ತಬಾಗಿಲು:ಹರ್ಝತ್ ಸೈದಾನಿ ಬೀಬಿ ದರ್ಗಾದಲ್ಲಿ ಮಾಸಿಕ 9 ನೇ ಸ್ವಲಾತ್ ಕಾರ್ಯಕ್ರಮ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗುವ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಳೆಂಜ: ನೆಕ್ಕಾರಾಜೆ ತಿಮ್ಮಪ್ಪ ಗೌಡ ನಾಪತ್ತೆ: ಶವ ಮನೆಯ ಸಮೀಪದ ತೋಡಿನಲ್ಲಿ ಪತ್ತೆ

Suddi Udaya
error: Content is protected !!