26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿವರದಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರಿಂದ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ಮಟ್ಟದ ಜಿನ ಭಜನೆ ಸೀಸನ್ 7ರ ಆಮಂತ್ರಣ ಪತ್ರಿಕೆ ಬಿಡುಗಡೆ

ಧರ್ಮಸ್ಥಳ: ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಅಂಗವಾಗಿ ನವೆಂಬರ್ ತಿಂಗಳ 5ನೇ ತಾರೀಖಿನಂದು ವೇಣೂರಿನಲ್ಲಿ ನಡೆಯುವ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ಮಟ್ಟದ ಜಿನ ಭಜನೆ ಸೀಸನ್ ಏಳರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು ಬಿಡುಗಡೆ ಮಾಡಿ ಆಶೀರ್ವದಿಸಿದರು.

ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಶ್ರೀಮತಿ ಸುಪ್ರಿಯ ಹರ್ಷೇಂದ್ರ ಕುಮಾರ್ ಮತ್ತು ಶ್ರೀಮತಿ ಸೋನಿಯಾ ವರ್ಮ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಜೈನ್ ಮಿಲನ್, ಮಂಗಳೂರು ವಿಭಾಗದ ಉಪಾಧ್ಯಕ್ಷರಾದ ವೀರ್ ಸುದರ್ಶನ್ ಜೈನ್ ಬಂಟ್ವಾಳ, ಕಾರ್ಯದರ್ಶಿಗಳಾದ ವೀರ್ ಸುಭಾಷ್ ಚಂದ್ರ ಜೈನ್ ಬಂಟ್ವಾಳ, ನಿರ್ದೇಶಕರಾದ ವೀರ್ ಬಿ. ಸೋಮಶೇಖರ ಶೆಟ್ಟಿ, ವೀರ್ ಬಿ ಪ್ರಮೋದ್ ಕುಮಾರ್ ವೇಣೂರು, ವೀರಾಂಗನಾ ರಾಜಶ್ರೀ ಜೈನ್, ಜೊತೆ ಕಾರ್ಯದರ್ಶಿ ವೀರಾಂಗಣ ಶ್ವೇತಾ ಜೈನ್ ಮೂಡುಬಿದರಿ, ವೇಣೂರು ಜೈನ್ ಮಿಲನ್ ಅಧ್ಯಕ್ಷರಾದ ವೀರ್ ಸುಕುಮಾರ್ ಜೈನ್, ಕಾರ್ಯದರ್ಶಿ ವೀರ್ ನಿರ್ಮಲ್ ಕುಮಾರ್ ಜೈನ್, ಉಪಾಧ್ಯಕ್ಷರಾದ ವೀರ್ ವೃಷಭ ರಾಜ ಜೈನ್ ವೀರಾಂಗನಾ ಸಂಭಾಷಣಿ, ಕೋಶಾಧಿಕಾರಿ ವೀರ್ ಗುಣಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಅಪಘಾತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಜನಮಂಗಳ ಕಾರ್ಯಕ್ರಮದಡಿ ವೀಲ್ ಚಯರ್ ವಿತರಣೆ

Suddi Udaya

ಬೆಹರೆನ್ ದೇಶದ ಬಿಲ್ಲವ ವೈಭವ ಕಾರ್ಯಕ್ರಮದಲ್ಲಿ ರಕ್ಷಿತ್ ಶಿವರಾಮ್ ರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ : ರೆಂಕೆದಗುತ್ತು ನಿವಾಸಿ ಉದಯ ಪೂಜಾರಿ ನಿಧನ

Suddi Udaya

ಮಡಂತ್ಯಾರಿನಲ್ಲಿ ಭದ್ರಾ ಹೋಮ್ ಅಪ್ಲಾಯನ್ಸಸ್ ಮೂರನೇ ಶಾಖೆ ಶುಭಾರಂಭ

Suddi Udaya

ಮುಂಡಾಜೆ ಪ್ರಾ.ಕೃ.ಪ.ಸ. ಸಂಘದ ನೂತನ ವಾಸ್ತವ್ಯದ ಮನೆ, ಸಭಾಭವನ ಉದ್ಘಾಟನೆ

Suddi Udaya
error: Content is protected !!