20.9 C
ಪುತ್ತೂರು, ಬೆಳ್ತಂಗಡಿ
January 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸರ್ಕಾರಿ ಇಲಾಖಾ ಸುದ್ದಿ

ಬಂದಾರು ಗ್ರಾಮ ಪಂಚಾಯತ್ ನ ಗ್ರಾಮ ಸಭೆ

ಬಂದಾರು : ಬಂದಾರು ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ದಿನೇಶ್‌ ಖಂಡಿಗ ಇವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜ.16ರಂದು ನಡೆಯಿತು.

ನೋಡೆಲ್ ಅಧಿಕಾರಿಯಾಗಿ ಮುಖ್ಯ ಪಶು ವೈದ್ಯಧಿಕಾರಿ ವಿಶ್ವನಾಥ್ ವಹಿಸಿದರು. ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ವರದಿ ಮಂಡಿಸಿದರು. ಲೆಕ್ಕ ಪತ್ರವನ್ನು ದಿನಕರ ಸಭೆಗೆ ಮಂಡಿಸಿದರು.

ಇಲಾಖೆ ಅಧಿಕಾರಿಗಳಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಮೆಸ್ಕಾಂ ಇಲಾಖೆ, ಅರಣ್ಯ ಇಲಾಖೆ. ಅರೋಗ್ಯ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದವರು ಉಪಸ್ಥಿತರಿದ್ದು ಇಲಾಖೆ ಮಾಹಿತಿ ನೀಡಿದರು.

ಈ ವೇಳೆ ಬಂದಾರು ಗ್ರಾಮದ ಪ್ರೌಢ ಶಾಲಾ ಕ್ರೀಡಾ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಂದಾರು ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪವತಿ, ಸದಸ್ಯರಾದ ಪರಮೇಶ್ವರಿ ಗೌಡ, ಗಂಗಾಧ‌ರ್ ಪೂಜಾರಿ, ಸುಚಿತ್ರ, ಪವಿತ್ರ, ಚೇತನ, ವಿಮಲಾ,.ಮೋಹನ್, ಅನಿತಾ, ಭಾರತಿ, ಬಾಲಕೃಷ್ಣ ಗೌಡ, ಶಿವ ಗೌಡ, ಶಿವಪ್ರಸಾದ್, ಮಂಜುಶ್ರೀ, ಶಾಂತ ಹಾಗೂ ಗ್ರಾಮಸ್ಥರು ಸಿಬ್ಬಂದಿ ವರ್ಗದರು ಉಪಸ್ಥಿತರಿದ್ದರು.

Related posts

ಕುವೆಟ್ಟು: ಶಕ್ತಿನಗರದ ಬಳಿ ಪಾದಾಚಾರಿಗೆ ಬೈಕ್ ಡಿಕ್ಕಿ

Suddi Udaya

ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ವಿ. ದೇವಸ್ಯ, ಉಪಾಧ್ಯಕ್ಷರಾಗಿ ಸುನಿಲ್ ದೊಂಡೋಲೆ ಅವಿರೋಧ ಆಯ್ಕೆ

Suddi Udaya

ಉಜಿರೆ : ಸರ್ವಿಸ್ ಮಾಡಿ ಮನೆ ಬಳಿ ನಿಲ್ಲಿಸಿದ್ದ ಬೈಕ್ ಕಳವು

Suddi Udaya

ಅಳದಂಗಡಿ ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘದ ವಾರ್ಷಿಕ ಪೂಜಾ ಕಾರ್ಯಕ್ರಮದ ಪೂರ್ವಭಾವಿ ಸಭೆ

Suddi Udaya

ನಾಲ್ಕೂರು: ಪೆರ್ಮುಡ- ಅಟ್ಟೆಮಾರು ರಸ್ತೆ ಕಾಂಕ್ರೀಟಿಕರಣ: ರಸ್ತೆ ಅಭಿವೃದ್ಧಿಯಿಂದ ಸಾರ್ವಜನಿಕರಿಗೆ ಅನುಕೂಲ

Suddi Udaya

ಉಜಿರೆ ಲಕ್ಷ್ಮಿ ಗ್ರೂಪ್ ಮಾಲಕ ಮೋಹನ್ ಕುಮಾರ್ ರವರಿಂದ ಯೋಗಾಸನ ಸ್ಪರ್ಧೆಗೆ ವಿದ್ಯಾರ್ಥಿಗಳಿಗೆ ಯೂನಿಪಾರ್ಮ್ ವಿತರಣೆ

Suddi Udaya
error: Content is protected !!