ಮಡಂತ್ಯಾರು : ಜೆಸಿಐ ಮಡಂತ್ಯಾರಿನ 2024 ರ ಶಾಶ್ವತ ಯೋಜನೆಗಳಾದ ಶಿಶು ವಿಹಾರದ ಇಂಟರ್ಲಾಕ್ ಅಳವಡಿಕೆ ಮತ್ತು ಜೆಸಿ ವೃತ್ತದ ನವೀಕರಣದ ಅನಾವರಣ ಕಾರ್ಯಕ್ರಮವು ಜ.14 ರಂದು ನೆರವೇರಿತು.
ಮುಖ್ಯ ಅತಿಥಿಗಳಾಗಿ ಪೂರ್ವಾದ್ಯಕ್ಷ ಜೆಸಿ ಪ್ರವೀಣ್ ಕುಮಾರ್ ದೋಟ, ನಿಕಟ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಜೆಸಿಐ ಪಿಪಿಪಿ ಕಾರ್ತಿಕೇಯ ಮಧ್ಯಸ್ಥ, ಗೌರವ ಅತಿಥಿಗಳಾಗಿ ವಲಯಾಧ್ಯಕ್ಷರು ಜೆಸಿಐ ಸೆನೆಟರ್ ಅಭಿಲಾಷ್ ಬಿ ಎ, ವಲಯ ಉಪಾಧ್ಯಕ್ಷರಾದ ಜೆಎಫ್ಎಮ್ ರಂಜಿತ್ ಹೆಚ್. , ಶಿಶುವಿಹಾರ ಮಹಿಳಾಮಂಡಲ ಮಡಂತ್ಯಾರು ಇದರ ಅಧ್ಯಕ್ಷೆ ಶ್ರೀಮತಿ ಲೂಸಿ ಕಾರ್ಲೊ ಇವರಿಂದ ನಡೆಯಿತು.
ಈ ಸಂದರ್ಭದಲ್ಲಿ ಘಟಕಾಧ್ಯಕ್ಷ ಜೇಸಿ ವಿಕೇಶ್ ಮಾನ್ಯ, ವಲಯ ನಿರ್ದೇಶಕರಾದ ಜೇಸಿ ಅಶೋಕ್ ಗುಂಡಿಯಲ್ಕೆ, ನಿಯೋಜಿತ ಅಧ್ಯಕ್ಷ ಜೇಸಿ ಅಮಿತಾ ಅಶೋಕ್, ಕಾರ್ಯದರ್ಶಿ ಜೇಸಿ ಸಂಯುಕ್ತ್ ಪೂಜಾರಿ, ನಿಯೋಜಿತ ಕಾರ್ಯದರ್ಶಿ ಜೇಸಿ ಆದರ್ಶ್ ಹಟ್ಟತ್ತೋಡಿ, ಮಹಿಳಾಮಂಡಲದ ಸದಸ್ಯರಾದ ಶ್ರೀಮತಿ ರೋಹಿಣಿ ಪಕಳ, ಶ್ರೀಮತಿ ಸವಿತ, ಶ್ರೀಮತಿ ಚಂದ್ರಕಲಾ, ಜೇಸಿ ಘಟಕದ ಸದಸ್ಯರಾದ ಜೇಸಿ ಯತೀಶ್ ರೈ, ಜೇಸಿ ಮನೋಜ್ ಮೈಲೋಡಿ, ಜೇಸಿ ಸಾಯಿಸುಮ ಎಂ.ನಾವಡ, ಜೇಸಿ ತೃಪ್ತಿ ವಿಕೇಶ್, ಬೆಳ್ತಂಗಡಿ ಮಂಜುಶ್ರೀ ಇದರ ನಿಕಟ ಪೂರ್ವ ಮಹಿಳಾ ಸಂಯೋಜಕಿ ಜೇಸಿ ಶ್ರುತಿ ರಂಜಿತ್ ಹಾಗೂ ಇತರರು ಉಪಸ್ಥಿತರಿದ್ದರು.