September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿ

ಮೊಗ್ರು :ಮುಗೇರಡ್ಕ ಮೂವರು ದೈವಸ್ಥಾನದಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆ

ಮೊಗ್ರು: ಶ್ರೀ ಕ್ಷೇತ್ರ ಮುಗೇರಡ್ಕ ದೈವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ಮತ್ತು ಬಿಸಿನೀರಿನ ವ್ಯವಸ್ಥೆಯ ಯಂತ್ರವನ್ನು ಮೊಗ್ರು ಗ್ರಾಮದ ಪರಾರಿ ಮನೆ ಶ್ರೀಮತಿ ಜಯಂತಿ ಮತ್ತು ಸುಂದರಗೌಡ ಮತ್ತು ಮಕ್ಕಳು ಕೊಡುಗೆಯಾಗಿ ನೀಡಿರುತ್ತಾರೆ.

ಈ ನೀರಿನ ಘಟಕವನ್ನು ಜ 14 ಮಕರಸಂಕ್ರಮಣ ದಿನ ಮುಗೇರಡ್ಕ ದೈವಸ್ಥಾನದ ಗುತ್ತು ಮನೆಯ ಡಿ ರಾಮಣ್ಣ ಗೌಡ ಇವರು ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಮನೋಹರ್ ಅಂತರ, ಜಯಂತಿ ಮತ್ತು ಸುಂದರ ಗೌಡ ಪರಾರಿ ಮನೆ, ಸಹೋದರರಾದ ಸಾಂತಪ್ಪ ಗೌಡ ಮುಗೇರಡ್ಕ, ಚಂದ್ರಶೇಖರ ಮುಗೇರಡ್ಕ, ಸುಧಾಕರ್ ಗೌಡ ನೈಮಾರು , ರಾಮಣ್ಣ ಗೌಡ ಎರ್ಮಲ, ಕೇಶವ ಗೌಡ ಜಾಲ್ನಡೆ, ವೀರಪ್ಪ ಗೌಡ, ಕಿನ್ಯಣ್ಣ ಬರುಂಗುಡೆಲು , ಚಂದಪ್ಪ ದoಬೆತ್ತಿಮಾರು ಕೊರಗಪ್ಪ ಗೌಡ ಪುಣ್ಕೆತಡಿ, ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಂಗಾಧರ ಪೂಜಾರಿ ದoಬೆತ್ತಿಮಾರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಹಯೋಗದೊಂದಿಗೆ ಕಲ್ಮಂಜ ಸ. ಪ್ರೌ. ಶಾಲೆಗೆ ಶೌಚಾಲಯ ನಿರ್ಮಿಸಿ ಹಸ್ತಾಂತರ

Suddi Udaya

ಬಾಲಕಿಯ ಮೇಲೆ ಅತ್ಯಾಚಾರ : ವೇಣೂರಿನ ರಿಕ್ಷಾ ಚಾಲಕ ಜಮಾಲುದ್ದೀನ್ ಬಂಧನ

Suddi Udaya

ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಉಜಿರೆ ಮುಂಡತ್ತೋಡಿ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಚಾವಡಿಯಲ್ಲಿ ಶ್ರಮದಾನ

Suddi Udaya

ಜು.5: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

Suddi Udaya

ಧರ್ಮಸ್ಥಳದಿಂದ ಆನ್‌ಲೈನ್ ಜಾಗೃತಿ ಕಾರ್ಯಕ್ರಮ; ಕುಂಭಶ್ರೀ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವೀಕ್ಷಣೆ

Suddi Udaya

ಯಕ್ಷಧ್ರುವ ಪಟ್ಲ ಘಟಕ ಬೆಳ್ತಂಗಡಿ ವತಿಯಿಂದ ಉಜಿರೆಯಲ್ಲಿ ಯಕ್ಷ ಸಂಭ್ರಮ

Suddi Udaya
error: Content is protected !!