ಬೆಳ್ತಂಗಡಿ (ಜ.16): ಉಪ್ಪಿನಂಗಡಿ – ಮಡಂತ್ಯಾರ್ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯವಿಲ್ಲದ ಕಾರಣ ವಿಧ್ಯಾರ್ಥಿಗಳು, ಕೂಲಿ ಕಾರ್ಮಿಕರು, ಉದ್ಯೋಗಸ್ಥರು ತುಂಬಾ ಅನಾನುಕೂಲ ಅನುಭವಿಸುತ್ತಿದ್ದು ಇದನ್ನು ನಿವಾರಿಸಲು ಉಪ್ಪಿನಂಗಡಿ – ಮಡಂತ್ಯಾರ್ ರಸ್ತೆಯಲ್ಲಿ ಸರ್ಕಾರಿ ಬಸ್ಸುಗಳನ್ನು ಪ್ರಾರಂಭಿಸಿ ಸುಮಾರು ವರ್ಷಗಳಿಂದ ಇರುವ ಪ್ರಯಾಣಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಣಿಯೂರು ಬ್ಲಾಕ್ ಸಮಿತಿ ನಿಯೋಗ ರಾಜ್ಯ ಸಾರಿಗೆ ಅಧಿಕಾರಿಗಳನ್ನು ಗುರುವಾರ ಭೇಟಿಯಾಗಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಕಣಿಯೂರು ಬ್ಲಾಕ್ ಅಧ್ಯಕ್ಷರಾದ ಮುಸ್ತಫ ಬಂಗೇರಕಟ್ಟೆ, ಕೋಶಾಧಿಕಾರಿ ಫೈಝಲ್ ಮೂರುಗೋಳಿ, ಬ್ಲಾಕ್ ಸಮಿತಿ ಸದಸ್ಯರಾದ ಬಿ.ಎಂ ರಝಾಕ್, ನೌಶಾದ್ ತೆಕ್ಕಾರ್ ಹಾಗೂ ಅಶ್ರಫ್ ಕಲ್ಲೇರಿ ಉಪಸ್ಥಿತರಿದ್ದರು.