21.3 C
ಪುತ್ತೂರು, ಬೆಳ್ತಂಗಡಿ
January 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಲ್ಮಂಜ ಸ್ಕಂದ ಸಂಜೀವಿನಿ ಗ್ರಾಮ ಪಂಚಾಯತ್ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

ಕಲ್ಮಂಜ: ಸ್ಕಂದ ಸಂಜೀವಿನಿ ಗ್ರಾಮ ಪಂಚಾಯತ್ ಮಹಿಳಾ ಒಕ್ಕೂಟ ಕಲ್ಮಂಜ(ರಿ). ಇದರ ವಾರ್ಷಿಕ ಮಹಾಸಭೆ ಜ.17 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶೋಭ ವಹಿಸಿದ್ದರು. ಒಕ್ಕೂಟದ ಅಧ್ಯಕ್ಷರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಜೀವಿನಿ ಸದಸ್ಯರು ಪ್ರಾರ್ಥನೆಯೊಂದಿಗೆ ವಲಯ ಮೇಲ್ವಿಚಾರಕ ಜಯಾನಂದ್ ಸಂಜೀವಿನಿ ಯೋಜನೆಯ ಸವಿಸ್ತಾರವಾದ ಮಾಹಿತಿಯನ್ನು ಸದಸ್ಯರಿಗೆ ನೀಡಿದರು.

ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಜೀವಿನಿಯಿಂದ ಪಿಎಂಎಫ್ ಎಮ್ ಇ‌‌ ಮತ್ತು ‌ಸಿಐಎಫ್ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿರುವ ಸದಸ್ಯೆಯನ್ನು ಸನ್ಮಾನಿಸಲಾಯಿತು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ವಲಯ ಮೇಲ್ವಿಚಾರಕರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಎರೆಹುಳ ಗೊಬ್ಬರವನ್ನು ಉತ್ಪಾದಕರ ಗುಂಪಿನಿಂದ ಸ್ಕಂದ ಸಂಜೀವಿನಿ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಸದಸ್ಯರು ಬೆಳೆದ ತರಕಾರಿ ಗಳನ್ನು ‌ಮಾರಾಟಕ್ಕೆ ಇಡಲಾಯಿತು. ಒಕ್ಕೂಟದ ವತಿಯಿಂದ ಸಂಜೀವಿನಿ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ನಂತರ ಒಕ್ಕೂಟದ ವಾರ್ಷಿಕ ವರದಿ ಜಮಾ ಖರ್ಚು ವಿವರವನ್ನು ಎಂಬಿಕೆ ಓದಿ ಹೇಳಿ ಅನುಮೋದನೆ ಪಡೆಯಲಾಯಿತು.

ಮಹಾಸಭೆಯಲ್ಲಿ ಲಕ್ಕಿ ಮಹಿಳೆಯನ್ನು ಗುರುತಿಸಿ ಬಹುಮಾನ ನೀಡಲಾಯಿತು. ಸಂಘದ ಸದಸ್ಯರು ಹಾಡು ನೃತ್ಯವನ್ನು ಮಾಡಿದರು. ನಂತರ ಪದಗ್ರಹಣ ಕಾರ್ಯಕ್ರಮವನ್ನು ನಡೆಸಲಾಯಿತು. ಹಳೆ ಸದಸ್ಯರಿಗೆ ಕಿರು ಕಾಣಿಕೆ ನೀಡಿ ಬೀಳ್ಕೊಡಲಾಯಿತು. ಶಿವಾನಿ ಸಂಜೀವಿನಿ ಸದಸ್ಯೆ ಶ್ರೀಮತಿ ಮಮತಾ ಸ್ವಾಗತಿಸಿ, ಪ್ರಸಿದ್ಧಿ ಸಂಜೀವಿನಿ ಸದಸ್ಯೆ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ದೀಪ ಸಂಜೀವಿನಿ ಸದಸ್ಯೆ ಶ್ರೀಮತಿ ಶುಭ ಧನ್ಯವಾದವಿತ್ತರು.

Related posts

ಕು.ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

Suddi Udaya

ಗೇರುಕಟ್ಟೆ: ಶ್ರೀ ಪಾರ್ಶ್ವನಾಥ ಫ್ಯೂಯಲ್ ಶುಭಾರಂಭ

Suddi Udaya

ಬಂದಾರು: ಬಟ್ಲಡ್ಕ ದರ್ಗಾ ಶರೀಫ್ ನಲ್ಲಿ ಉರೂಸ್ ಮುಬಾರಕ್

Suddi Udaya

ಕಲ್ಲೇರಿಯಲ್ಲಿ ಜನಔಷಧಿ ಕೇಂದ್ರ ಶುಭಾರಂಭ

Suddi Udaya

ಹತ್ಯಡ್ಕ: ನಿವೃತ್ತಿಗೊಂಡ ಕೆ.ವಿ.ಜಿ ಬ್ಯಾಂಕ್ ಮ್ಯಾನೇಜರ್ ಪುಷ್ಪರಾಜ್ ಕೆ.ಸಿ ರವರಿಗೆ ಬಿಳ್ಕೋಡುಗೆ ಸಮಾರಂಭ

Suddi Udaya

ಬೆಳ್ತಂಗಡಿ ಹಂಸ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲೆಯನ್ಸ್& ಫರ್ನಿಚರ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ

Suddi Udaya
error: Content is protected !!